ಬೆಳ್ಳಾರೆ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಏಕಾಹಭಜನೆ, ಕಾರ್ತಿಕ ಪೂರ್ಣಿಮೆಯ ಲಕ್ಷದೀಪ ಉತ್ಸವಗಳು ನ.25ರಿಂದ ಆರಂಭಗೊಂಡಿದ್ದು, ಈ ಪ್ರಯುಕ್ತ ಬೆಳಿಗ್ಗೆ ಪ್ರಾರ್ಥನೆ , ದೀಪೋಜ್ವಲನ ಹಾಗೂ ಏಕಾಹ ಭಜನೆ ನಡೆಯಿತು. ನ.25ರ ಬುಧವಾರದಿಂದ ಮೊದಲ್ಗೊಂಡು ಡಿ.01ರ ಮಂಗಳವಾರದವರೆಗೆ ಏಕಾಹಭಜನೆ, ಕಾರ್ತಿಕ ಪೂರ್ಣಿಮೆಯ ಲಕ್ಷದೀಪ ಉತ್ಸವಗಳು ನಡೆಯಲಿದೆ. ಉತ್ಸವಾದಿಗಳ ಅಂಗವಾಗಿ ನ.25 ರ ಬುಧವಾರದಂದು ಬೆಳಿಗ್ಗೆ ಗಂಟೆ 10-00ಕ್ಕೆ ಪ್ರಾರ್ಥನೆ , ದೀಪೋಜ್ವಲನ , ಏಕಾಹ ಭಜನೆ , ರಾತ್ರಿ ಗಂಟೆ 10-00ಕ್ಕೆ ಮಹಾಪೂಜೆ,
ನ.26ರ ಗುರುವಾರದಂದು ಅತಿರಿಕ್ತ ಉಪವಾಸ , ರಾತ್ರಿ 7-30ಕ್ಕೆ ಮಹಾಪೂಜೆ, ನ.27ರ ಶುಕ್ರವಾರದಂದು ರಾತ್ರಿ 8-00ಕ್ಕೆ ದೇವರು ತುಲಸೀಕಟ್ಟೆಯಲ್ಲಿ ಆಸೀನರಾಗಿ ತುಲಸೀ ಪೂಜೆ , ಉತ್ಥಾನ ದ್ವಾದಶಿ , ರಾತ್ರಿ ಪಲ್ಲಕಿ ಉತ್ಸವ , ವಸಂತೋತ್ಸವ ಇತ್ಯಾದಿಗಳು, ನ.28ರ ಶನಿವಾರದಂದು ರಾತ್ರಿ ಪಲ್ಲಕಿ ಉತ್ಸವ , ವಸಂತೋತ್ಸವ ಕಾರ್ತಿಕ ಮಂಗಲ ತ್ರಯೋದಶಿ ಉತ್ಸವ ನ.29ರ ಆದಿತ್ಯವಾರದಂದು ರಾತ್ರಿ ಪಲ್ಲಕಿ ಉತ್ಸವ , ವಸಂತೋತ್ಸವ ವೈಕುಂಠ ಚತುರ್ದಶಿ ಉತ್ಸವ, ನ.30ರ ಸೋಮವಾರದಂದು ‘ಕಾರ್ತಿಕ ಪೌರ್ಣಮಿ – ಲಕ್ಷದೀಪ ‘ , ದೇವರು ವನಕ್ಕೆ ಚಿತ್ತೈಸುವುದು, ಧಾತ್ರಿಹೋಮ ರಾತ್ರಿ ಪಲ್ಲಕಿ ಉತ್ಸವ , ವಸಂತೋತ್ಸವ ಇತ್ಯಾದಿಗಳು, ಡಿ.01ರ ಮಂಗಳವಾರದಂದು ಬೆಳಿಗ್ಗೆ 10-00ರಿಂದ ‘ ಅವಭೃತೋತ್ಸವ’, ಅವಭ್ರತ ಸ್ನಾನ , ದ್ವಾದಶ ಕಲಶಾಭಿಷೇಕ , ಮಧ್ಯಾಹ್ನ ಪೂಜೆ , ಪ್ರಸಾದ ವಿತರಣೆ ಹಾಗೂ ಭೂರಿಭೋಜನ ಕಾರ್ಯಕ್ರಮಗಳು ನಡೆಯಲಿದೆ. ಕೋವಿಡ್ 19 ರ ಕಾರಣ ಕಾರಕ್ರಮದಲ್ಲಿ ವ್ಯತ್ಯಾಸವಾಗುವ ಸಂಭವವಿದ್ದು ಭಜಕರು ಸಹಕರಿಸಬೇಕಾಗಿ ಆಡಳಿತ ಮೋಕ್ತೇಸರರಾದ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Saturday
- November 23rd, 2024