
ಅಲ್ಪಂಖ್ಯಾತ ವಿವಿದ್ದೋದ್ದೇಶ ಸಹಕಾರಿ ಸಂಘ ಇದರ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯಲ್ಲಿ ಕಾಂಗ್ರೆಸ್ ಪಕ್ಷವು ಯಾವುದೇ ಹಸ್ತಾಕ್ಷೇಪವನ್ನು ಮಾಡಲಿಲ್ಲ. ಪಕ್ಷದ ನಾಯಕರುಗಳು ಪಕ್ಷದ ಹೆಸರನ್ನು ಹೇಳಿ ಸ್ಪರ್ಧಿಸಿ ಸೋತಾಗ ಪಕ್ಷದ ತಲೆಗೆ ಕಟ್ಟುವುದು ಸರಿಯಾದ ವಿಧಾನವಲ್ಲ. ಪಕ್ಷವು ಇವರಿಗೆ ಬಿ’ಫಾರಂ ನೀಡಿ ಚುನಾವಣೆಗೆ ನಿಲ್ಲಲ್ಲು ಕಳುಹಿಸಿರುವುದಿಲ್ಲ. ಸಂಘದಲ್ಲಿ ಬಹುತೇಕ ನಾಯಕರು ನಮ್ಮದೇ ಪಕ್ಷದವರಾದ ಕಾರಣ ಹೊಸ ಮುಖಗಳಿಗೆ ಆಧ್ಯತೆಯನ್ನು ನೀಡಿ ಪ್ರೋತ್ಸಾಹಿಸಿ ಎಂದು ಸಲಹೆಗಳನ್ನು ನೀಡಿದ್ದೇವೆಯೇ ವಿನಃ ನೀವೇ ಚುನಾವಣೆಗೆ ಸ್ಪರ್ಧಿಸಿ ಎಂದು ಕಾಂಗ್ರೆಸ್ ಪಕ್ಷದಿಂದ ಯಾರನ್ನು ಕಳುಹಿಸಿಲ್ಲ ಎಂದು ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ನ.೨೫ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಳೆದ ಎರಡು ದಿನಗಳ ಹಿಂದೆ ಸುಳ್ಯದಲ್ಲಿ ನಡೆದ ಅಲ್ಪಸಂಖ್ಯಾತ ಸೊಸೈಟಿಯ ಚುನಾವಣೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಪಕ್ಷದ ಮುಖಂಡರ ಸೋಲಿನ ಬಗ್ಗೆ ಎದ್ದಿರುವ ಊಹಾಪೋಹಗಳ ಬಗ್ಗೆ ಸ್ಪಷ್ಟೀಕರಣ ನೀಡಿ ಅವರು ಮಾತನಾಡಿದರು.
ಮಾಧ್ಯಮವೊಂದು ಕಾಂಂಗ್ರೆಸ ಪಕ್ಷದ ಮುಖಭಂಗವೆಂದು ವರದಿ ಮಾಡಿರುವುದು ಸರಿಯಲ್ಲ. ವರದಿಗೂ ಮುನ್ನ ಸಂಬಂಧಪಟ್ಟ ಅಧ್ಯಕ್ಷರೊಂದಿಗೆ ವಿವರಣೆಯನ್ನು ಕೇಳದೇ ಏಕಾಏಕಿ ವರದಿ ಮಾಡಿರುವುದು ಸರಿಯಲ್ಲ ಎಂದು ಮಾಧ್ಯಮದಲ್ಲಿ ಬಂದ ವರದಿಗೆ ಪ್ರತಿಕ್ರಿಯೆ ನೀಡಿದರು. ಕ್ರಮ ಕೈಗೊಳ್ಳುವ ಯಾವುದೇ ವಿಷಯ ನಮ್ಮಲ್ಲಿಲ್ಲ. ಇದಕ್ಕೆ ಅವಶ್ಯಕೆಯೂ ಪಕ್ಷಕ್ಕಿಲ್ಲ. ಈಗಾಗಲೇ ಸೋತಿರುವ ಅಭ್ಯರ್ಥಿಯಲ್ಲೊರ್ವರಾದ ಶಾಫಿ ಕುತ್ತಮೊಟ್ಟೆಯವರ ಹೇಳಿಕೆಯನ್ನು ನಾವು ಸ್ವೀಕರಿಸುತ್ತೇವೆ. ಈ ವಿಷಯದ ಬಗ್ಗೆ ಚರ್ಚೆಗೆ ನಾವು ಸದಾ ಇದ್ದೇವೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಸಂಶುದ್ಧೀನ್‌ರವರು ಮಹಾತ್ಮಗಾಂಧಿ ಚಾರಿಟೇಬಲ್‌ಟ್ರಸ್ಟ್‌ನ ಕಾರ್ಯಾಧ್ಯಕ್ಷರಾಗಿರುವುದರಿಂದ ಟ್ರಸ್ಟಿನ ಕಚೇರಿಯಲ್ಲಿ ಕುಳಿತು ಅವರು ಮಾತನಾಡಿದ್ದಕ್ಕೆ ಪಕ್ಷದ ಸಭೆ ಎಂದು ಹೇಳಲು ಸಾಧ್ಯವಿಲ್ಲ. ಸ್ಪರ್ಧಿಸುವವರು ನಮ್ಮದೇ ಪಕ್ಷದವರಾದ ಕಾರಣ ಸ್ಪರ್ಧಾಳುಗಳು ಹೆಚ್ಚಿನ ಸಂಖ್ಯೆಯಲ್ಲಿರುವಾಗ ಅವರನ್ನು ಸರಿಮಾಡಬೇಕಾದುದು ವೈಯಕ್ತಿಕ ನಿಟ್ಟಿನಲ್ಲಿ ನಮ್ಮ ಕರ್ತವ್ಯವಾಗಿತ್ತು. ಆದ್ದರಿಂದ ವಿಷಯ ನಮ್ಮ ಗಮನಕ್ಕೆ ಬಂದಾಗ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಂಸ್ಥೆಯಾದ ಕಾರಣ ಅದನ್ನು ನೀವು ನೀವೇ ಬಗೆಹರಿಸಿಕೊಳ್ಳಿ ಎಂದು ನಾವು ಹೇಳಿದ್ದೇವೆ. ಸೋತಾಗ ಅವರವರೇ ಪಾಠ ಕಲಿತ ಹಾಗೇ ಆಗಿದೆ ಎಂದು ಹೇಳಿದರು. ಸುಳ್ಯ ಕಾಂಗ್ರೆಸ್ ನಗರಾಧ್ಯಕ್ಷ ಎಂ.ಜೆ ಶಶಿಧರ ಮಾತನಾಡಿ ವೈಯಕ್ತಿಕ ನೆಲೆಯಲ್ಲಿ ಮತ್ತು ಸ್ನೇಹದ ವಿಷಯದಲ್ಲಿ ಅವರೊಂದಿಗೆ ಸಹಕರಿಸಿದ್ದೇವೆಯೇ ವಿನಃ ಪಕ್ಷದಿಂದ ನಮ್ಮನ್ನು ಯಾರೂ ಕಳುಹಿಸಲಿಲ್ಲ ಎಂದು ಹೇಳಿದರು. ಇಲ್ಲಿ ಸೋತದ್ದು ಸಂಶುದ್ದೀನ್‌ರವರಲ್ಲ ನನ್ನ ಪ್ರಾಮಾಣಿಕ ಪ್ರಯತ್ನ ಸೋತಿದೆ ಎಂದು ಅವರು ಹೇಳಿದರು. ಈ ಚುನಾವಣೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ನಂದರಾಜ್ ಸಂಕೇಶ, ಗೋಕುಲ್ ದಾಸ್, ಸಚಿನ್ ರಾಜ್ ಶೆಟ್ಟಿ ಬೆಳ್ಳಾರೆ, ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.