ಸುಳ್ಯ ತಾಲೂಕು ಟೈಲರಿಂಗ್ ಅಸೋಸಿಯೇಶನ್ ವಲಯ ಸಮಿತಿ ಮಹಾಸಭೆ ನ.೨೪ರಂದು ಸುಳ್ಯ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷರಾದ ಲಾವಣ್ಯ ಜಯನಗರ ವಹಿಸಿದ್ದರು. ವೇದಿಕೆಯಲ್ಲಿ ಪ್ರ.ಕಾರ್ಯದರ್ಶಿ ಹೇಮಾವತಿ ಅತ್ಯಡ್ಕ, ಕ್ಷೇತ್ರ ಅಧ್ಯಕ್ಷ ದಿವಾಕರ ಟಿ. ಜಾಲ್ಸೂರು, ಕ್ಷೇತ್ರ ಕಾರ್ಯದಶಿ
ಶರ್ಮಿಳಾ ವಿ.ರೈ, ಜಿಲ್ಲಾ ಜೊತೆ ಕಾರ್ಯದರ್ಶಿ ಲೀಗೋಧರ ಆಚಾರ್ಯ, ಕ್ಷೇತ್ರ ಕೋಶಾಧಿಕಾರಿ ಆಶಾ ವಿ ರೈ ಮೊದಲಾದವರು ಉಪಸ್ಥಿತರಿದ್ದರು. ಕ್ಷೇತ್ರ ಅಧ್ಯಕ್ಷ ದಿವಾಕರ ಟಿ. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮಕ್ಕೂ ಮೊದಲು ಇತ್ತೀಚಿಗೆ ನಿಧನರಾದ ಸಮಿತಿಯ ಹಿರಿಯ ಸದಸ್ಯ ಜತ್ತಪ್ಪ ಗೌಡ ಜಯನಗರರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಡಿ.೮ರಂದು ನಡೆಯಲಿರುವ ಕ್ಷೇತ್ರ ಮಹಾಸಭೆಯ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ನಡೆಸುವ ಯೋಜನೆ ಅಭಿವೃದ್ಧಿಯ ಬಗ್ಗೆ ಚರ್ಚೆಗಳು ನಡೆದವು. ಬಾಬು ಮಣಿಯಾಣಿ ಪ್ರಾರ್ಥಿಸಿದರು. ಹೇಮಾವತಿ ಅತ್ಯಡ್ಕ ಸ್ವಾಗತಿಸಿ, ವಂದಿಸಿದರು.
- Thursday
- April 3rd, 2025