
ಕಂದ್ರಪ್ಪಾಡಿ ಶ್ರೀ ರಾಜ್ಯ ದೈವ ಮತ್ತು ಪುರುಷದೈವ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಕಾಳಿಕಾ ಪ್ರಸಾದ್ ಮುಂಡೋಡಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾದ ಅವರನ್ನು ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ವೇಣು ಕುಮಾರ್ ಚಿತ್ತಡ್ಕ ಸೂಚಿಸಿದರು, ಪದ್ಮನಾಭ ಎಂ ಮೀನಾಜೆ ಅನುಮೋದಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಪ್ರೀತಮ್ ಮುಂಡೋಡಿ, ಶ್ರೀಮತಿ ಮಹಾದೇವಿ ಎ. ಪೈಕ, ಶ್ರೀಮತಿ ಯಶೋಧ ಪಿ ಅರ್ ಪಾರೆಪ್ಪಾಡಿ, ಶಶಿಧರ್ ಜಾಕೆ,ಲೋಕಪ್ಪ ಶೀರಡ್ಕ ಉಪಸ್ಥಿತರಿದ್ದರು.ಹಾಗೂ ದೈವಸ್ಥಾನದ ಅರ್ಚಕರಾದ ವೆಂಕಪ್ಪ ಗೌಡ ಹಿರಿಯಡ್ಕ, ದೊಡ್ಡಣ್ಣ ಗೌಡ ಕಾಜಿಮಡ್ಕ, ಊರವರಾದ ಭವಾನಿಶಂಕರ್ ಮುಂಡೋಡಿ, ಕಿಶೋರ್ ಕುಮಾರ್ ಪೈಕ, ಉಪಸ್ಥಿತರಿದ್ದರು.