Ad Widget

ಹವ್ಯಕ ವಲಯ ಸಮಿತಿಯಿಂದ ವಿವಿಧೆಡೆ ಸರಣಿ ಗೋಪೂಜೆ


ಪುಚ್ಚಪ್ಪಾಡಿ ಸರಣಿ ಗೋಪೂಜೆ

. . . . . . . . .

ಭಾರತೀಯ ಗೋತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆಯ ಉದ್ದೇಶದಿಂದ ಗುತ್ತಿಗಾರು ಹವ್ಯಕ ವಲಯದ ವತಿಯಿಂದ ದೀಪಾವಳಿ ಶುಭ ಸಂದರ್ಭದಲ್ಲಿ ನಡೆಸಿಕೊಂಡು ಬರುತ್ತಿರುವ ಸರಣಿ ಗೋಪೂಜೆಯ 7 ನೇ ವರ್ಷದ ಸರಣಿಯ ಮೊದಲ ಗೋಪೂಜೆ ಹಾಗೂ ಗೋನಿಧಿ ಸಮರ್ಪಣಾ ಕಾರ್ಯಕ್ರಮ ಕಾಂತಿಲ ಶ್ರೀ ಘಟಕ ವ್ಯಾಪ್ತಿಯ ಮಹೇಶ ಪುಚ್ಚಪ್ಪಾಡಿ ಯವರ ಮನೆಯಲ್ಲಿ‌ ನ.16 ರಂದು ನೆರವೇರಿತು. ವಲಯ ವೈದಿಕ ಪ್ರಧಾನ ಮುರಳೀಕೃಷ್ಣ ಭಟ್ ಮಾರ್ಗದರ್ಶನದಲ್ಲಿ ಮಹೇಶ ಪುಚ್ಚಪ್ಪಾಡಿ ಗೋಪೂಜೆ ನಡೆಸಿದರು. ವಲಯದ ಹಿರಿಯ ವೈದಿಕ ವಿದ್ವಾಂಸ ಕರುವಜೆ ಕೇಶವ ಜೋಯಿಸರು , ಗುರಿಕ್ಕಾರ ಕಾಂತಿಲ ಭೀಮ ಭಟ್ , ವಲಯದ ನಿಕಟಪೂರ್ವ ಕಾರ್ಯದರ್ಶಿ ಸೂರ್ಯನಾರಾಯಣ ಪುಚ್ಚಪ್ಪಾಡಿ ಹಾಗೂ ಊರ ಮಹನೀಯರು ಉಪಸ್ಥತರಿದ್ದು ಗೋಪೂಜೆಯಲ್ಲಿ ಭಾಗವಹಿಸಿ ಗೋನಿಧಿ ಸಮರ್ಪಿಸಿದರು.

. . . . . . .

ಅಡಿಕೆ ಹಿತ್ತಿಲು ಸರಣಿ ಗೋಪೂಜೆ:

ಗುತ್ತಿಗಾರು ಹವ್ಯಕ ವಲಯದ ವತಿಯಿಂದ ನಡೆಯುತ್ತಿರುವ ಸರಣಿ ಗೋಪೂಜೆಯ ಅಂಗವಾಗಿ ಶ್ರೀ ಭಾರತೀ ಹವ್ಯಕ ಘಟಕದ ಅಡಿಕೆ ಹಿತ್ತಿಲು ಸೀತಾರಾಮ ಭಟ್ಟರ ಮನೆಯಲ್ಲಿ ನ.17ರಂದು ಗೋಪೂಜೆ ವೇ.ಮೂ.ಪ್ರದೀಪನಾರಾಯಣ ಭಟ್ಟರು ನೆರವೇರಿಸಿದರು. ಗ್ರಾಮಿಣಿ ಬಿ.ಸುಬ್ರಾಯರು ಮತ್ತು ಘಟಕದ ಸದಸ್ಯರು ಭಾಗವಹಿಸಿ ಗೋನಿಧಿ ಸಮರ್ಪಿಸಿ ಗೋಸೇವೆಯಲ್ಲಿ ಭಾಗಿಗಳಾದರು.

ವಳಲಂಬೆ : ಸರಣಿ ಗೋಪೂಜೆ

ಗುತ್ತಿಗಾರು ಹವ್ಯಕ ವಲಯದ ಸರಣಿ ಗೋಪೂಜೆಯ ಅಂಗವಾಗಿ ಶ್ರೀಪಾದ ಘಟಕದ ವತಿಯಿಂದ ನ.19 ರಂದು ವಳಲಂಬೆಯ ಹೂವನ ರಾಮಕೃಷ್ಣ ಭಟ್ಟರ ಮನೆಯಲ್ಲಿ ಗೋಪೂಜೆ ಹಾಗೂ ಗೋನಿಧಿ ಸಮರ್ಪಣೆ ನೆರವೇರಿತು. ವಲಯ ವೈದಿಕ ಪ್ರಧಾನ ಮುರಳೀಕೃಷ್ಣ ಭಟ್ ಮಾರ್ಗದರ್ಶನದಲ್ಲಿ ಹೂವನ ಪ್ರಸಾದ ಜೋಷಿ ಗೋಪೂಜೆ ನಡೆಸಿದರು. ವಲಯ ಕೋಶಾಧಿಕಾರಿ ಹಾಗೂ ಗುರಿಕ್ಕಾರ ಶ್ರೀಕೃಷ್ಣ ಗುಂಡಿಮಜಲು, ವಳಲಂಬೆ ಶಂಖಪಾಲ ಸುಬ್ರಹ್ಮಣ್ಯ ದೇವಳದ ಪ್ರಧಾನ ಅರ್ಚಕ ಪರಮೇಶ್ವರ ಭಟ್ ಸಹಿತ ಘಟಕ ಸದಸ್ಯರು ಉಪಸ್ಥಿತರಿದ್ದರು .

ಸುಬ್ರಹ್ಮಣ್ಯ ದಲ್ಲಿ ಸರಣಿ ಗೋಪೂಜೆ

ಮುಳ್ಳೇರಿಯಾ ಹವ್ಯಕ ಮಂಡಲದ ಗುತ್ತಿಗಾರು ವಲಯದ ಸುಬ್ರಹ್ಮಣ್ಯ ಘಟಕದಲ್ಲಿ ಸಾಮೂಹಿಕ ಗೋಪೂಜೆ ನಡೆಸಲಾಯಿತು.
ಸುಬ್ರಹ್ಮಣ್ಯ ದ ಸುಜ್ಞಾನ ಮಂದಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವೇದ ಮೂರ್ತಿ ರಾಮಕೃಷ್ಣ ಭಟ್ ಮಿತ್ತೂರು ಇವರು ಗೋಪೂಜೆ ನೆರವೇರಿಸಿ ಶುಭ ಹಾರೈಸಿದರು. ಗೋವು 33 ಕೋಟಿ ದೇವತೆಗಳ ಆವಾಸ ಸ್ಥಾನವಾಗಿದ್ದು, ಗೋವಿನ ಆರಾಧನೆಯಿಂದ ಲೋಕಶಾಂತಿ, ನೆಮ್ಮದಿ ದೊರೆಯುವುದು ಅಲ್ಲದೆ ಗೋವಿನ ಪ್ರತಿಯೊಂದು ಉತ್ಪನ್ನಗಳು ಪರಿಶುದ್ಧವಾಗಿದ್ದು, ಆರೋಗ್ಯ ವರ್ಧಕವಾಗಿರುತ್ತದೆ.ಗವ್ಯ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಬಹು ಬೇಡಿಕೆ ಇದೆ.
ಆದುದರಿಂದ ಪ್ರತಿಯೊಬ್ಬರ ಮನೆ ಮನಗಳಲ್ಲಿ ಗೋವು ಆರಾಧಿಸಲ್ಪಡಬೇಕು ಎಂದು ಹೇಳಿದರು.
ಗುತ್ತಿಗಾರು ವಲಯ ಅಧ್ಯಕ್ಷೆ ಶ್ರೀಮತಿ ದೇವಕಿ ಜಿ.ಭಟ್,
ವಲಯ ಉಪಾಧ್ಯಕ್ಷ ಸೂರ್ಯ ನಾರಾಯಣ ಭಟ್ ಪುಚ್ಚೆಪ್ಪಾಡಿ, ಕಾರ್ಯದರ್ಶಿ ಶ್ರೀ ಕೃಷ್ಣ ಶರ್ಮ .ಪಿ., ಗುರಿಕ್ಕಾರ ಕೆ.ರಾಮ ಶರ್ಮ, ವಿದ್ವಾನ್ ಕೇಶವ ಭಟ್, ವೇ.ಮೂ.ರಾಮಕೃಷ್ಣ ಭಟ್, ಉದಯ ಭಟ್ ಯೂತ್ ಬ್ರಿಗೇಡ್ ನ ಸದಸ್ಯರಾದ ಸೂರ್ಯ ನಾರಾಯಣ , ರಮೇಶ್ ಭಟ್ ಪ್ರಕಾಶ್, ವೇ.ಮೂ . ಪ್ರಸನ್ನ ಭಟ್ , ರಾಮಚಂದ್ರ ಭಟ್ ಮೊದಲಾದವರು ಉಪಸ್ಥಿತರಿದ್ದರು.
ವಲಯ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ ಸ್ವಾಗತಿಸಿ ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading