ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಭೂಮಿ ಖರೀದಿಗೆ ದಾನಿಗಳು ಇಂದು ಧನಸಹಾಯ ಮಾಡಿದರು.
ಶ್ರೀಮತಿ ಸ್ವಾತಿ ರಾಮಕೃಷ್ಣ ಭಟ್ ಕುರುಂಬುಡೇಲು 1ಲಕ್ಷ ರೂ., ಹಾಗೂ ವಿಶ್ವನಾಥ ಭಟ್ ಕುರುಂಬುಡೇಲು ವಿಪ್ರಭ ಇವರು ಇಪ್ಪತ್ತೈದು ಸಾವಿರ ಚೆಕ್ಕನ್ನು ಸಮರ್ಪಣೆ ಮಾಡಿದರು.
ದಾನಿಗಳಿಗೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಆರೆಸ್ಸೆಸ್ಸಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಸಹ ಪ್ರಮುಖ ಸುಭಾಶ್ಚಂದ್ರ ಕಳಂಜ ಉಪಸ್ಥಿತರಿದ್ದರು.
ಅರ್ಚಕರು ಉದಯ ಭಟ್ ಪೂಜಾ ಕಾರ್ಯ ನೆರವೇರಿಸಿ, ಪ್ರಸಾದವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಪನ್ನೆ, ಪ್ರೇಮಚಂದ್ರ ಪ್ರೇಮ್ ಸ್ಟುಡಿಯೋ ಬೆಳ್ಳಾರೆ, ವಸಂತ್ ಉಲ್ಲಾಸ್ ಹೊಟೇಲ್ , ಜಯಂತ ಮುಕ್ಕೂರು ,ವಿಶ್ವಹಿಂದ ಪರಿಷತ್ ಬೆಳ್ಳಾರೆಯ ಪ್ರಮುಖ್ ಪ್ರಸಾದ್, ಸಚಿನ್ ಪೂವಾಜೆ, ಭರತ್ ಭಂಡಾರಿ, ಭಾಸ್ಕರ ನೆಟ್ಟಾರು, ಪ್ರವೀಣ ನೆಟ್ಟಾರು, ಮನೋಜ್ ಶೆಟ್ಟಿ ನೆಟ್ಟಾರು, ಸನತ್ ಗೌಡ ಕಲ್ಲೋಣಿ, ವ್ಯವಸ್ಥಾಪನ ಸಮಿತಿಯ ಸದಸ್ಯ ನಾಗೇಶ್ ಕುಲಾಲ್ ಉಪಸ್ಥಿತರಿದ್ದರು. ವ್ಯ.ಸ.ಸದಸ್ಯ ಜಯರಾಮ ಉಮಿಕ್ಕಳ ಸ್ವಾಗತಿಸಿದರು.