
ಆಲೆಟ್ಟಿ ಗ್ರಾಮದ ಕುಡೆಕಲ್ಲು ಮನೆತನದ ಜಯನಗರ ನಿವಾಸಿ ಜತ್ತಪ್ಪ ಗೌಡ ರವರು ಹೃದಯಾಘಾತದಿಂದ ಇಂದು ಬೆಳಗ್ಗೆ ( ನ.22 ರಂದು )ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಒರ್ವ ಪುತ್ರ, ಒರ್ವ ಪುತ್ರಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.ಇವರು ಹಲವಾರು ವರ್ಷಗಳಿಂದ ಸುಳ್ಯದ ರೋಟರಿ ಶಾಲಾ ಬಳಿ ಟೈಲರ್ ವೃತ್ತಿ ಮಾಡುತ್ತಿದ್ದರು. ಮೃತರ ಅಂತ್ಯ ಸಂಸ್ಕಾರ ಇಂದು ಕುಡೆಕಲ್ಲು ಐನ್ ಮನೆಯಲ್ಲಿ ನಡೆಯಲಿರುವುದು ಎಂದು ತಿಳಿದು ಬಂದಿದೆ.