


ಸುಳ್ಯ ತಾಲೂಕು ಅಲ್ಪ ಸಂಖ್ಯಾತ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷತೆಗೆ ಇಂದು ಚುನಾವಣೆ ನಡೆಯಿತು. ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಸಂಶುದ್ದೀನ್ ಮತ್ತು ಜೆಡಿಎಸ್ ಪಕ್ಷದ ನೇತಾರ ಇಕ್ಬಾಲ್ ಎಲಿಮಲೆ ಅವರ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿತು. ಅಧ್ಯಕ್ಷ,ಉಪಾಧ್ಯಕ್ಷತೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಇಕ್ಬಾಲ್ ಎಲಿಮಲೆ, ಉಪಾಧ್ಯಕ್ಷ ರಾಗಿ ಹಾಜಿ ಮುಹಿಯ್ಯುದ್ದೀನ್ ಫ್ಯಾನ್ಸಿ ಆಯ್ಕೆಯಾದರು. ಇಕ್ಬಾಲ್ ಎಲಿಮಲೆ 7 ಮತಗಳನ್ನು ಪಡೆದುಕೊಂಡರೆ ಎಸ್ ಸಂಸುದ್ದಿನ್ ರವರು ಕೇವಲ 4 ಮತ ಪಡೆದು ಸೋಲೊಪ್ಪಿಕೊಂಡರು. ಉಪಾಧ್ಯಕ್ಷತೆಗೆ ಹಾಜಿ ಮುಹಿಯ್ಯುದ್ದೀನ್ ಫ್ಯಾನ್ಸಿ 6 ಮತಗಳನ್ನು ಪಡೆದು ವಿಜಯಶಾಲಿಯಾದರೇ, ಶಾಫಿ ಕುತ್ತಮೊಟ್ಟೆ ರವರು 5 ಮತಗಳನ್ನು ಪಡೆದು ಪರಾಭವಗೊಂಡರು. ಸಹಕಾರಿ ಸಂಘದಲ್ಲಿ ಒಟ್ಟು 11 ನಿರ್ದೇಶಕರಿದ್ದು ಮತದಾನ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತರು ಅಡ್ಡ ಮತದಾನ ಮಾಡಿರಬಹುದು ಎಂಬ ಮಾತು ಕೇಳಿ ಬರುತ್ತಿದೆ. ಚುನಾವಣಾಧಿ ಕಾರಿಯಾಗಿ ಸಹಕಾರಿ ಇಲಾಖೆಯ ಶಿವಲಿಂಗಯ್ಯ ಪ್ರಕ್ರಿಯೆ ನಡೆಸಿಕೊಟ್ಟರು.