Ad Widget

ಕೃಷಿ ಯಂತ್ರಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ಕಾರ್ಯಕ್ರಮ – ಕೃಷಿಗೆ ಆಧುನಿಕ ಸಲಕರಣೆಗಳ ಬಳಕೆ ಅನಿವಾರ್ಯ : ಗೋಪಾಲಕೃಷ್ಣ ಭಟ್ ಕಾನಾವು

ಮುಕ್ಕೂರು : ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಪೆರುವಾಜೆ ಆಳ್ವಪಾರ್ಮ್ಸ್ ಸಹಯೋಗದಲ್ಲಿ ಆಳ್ವಪಾರ್ಮ್ಸ್ ನಲ್ಲಿ ಕೃಷಿ ಯಂತ್ರಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ಕಾರ್ಯಕ್ರಮ ನ.21 ರಂದು ನಡೆಯಿತು.

. . . . .

ಆಳ್ವಫಾರ್ಮ್ಸ್ ಯಜಮಾನಿ ಕುಂಬ್ರ ಲಲಿತಾ ಎಸ್.ಆಳ್ವ ಅವರು ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿ ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಭಟ್ ಕಾನಾವು ಮಾತನಾಡಿ, ಸಂಘ ಸಂಸ್ಥೆಯ ನೇತೃತ್ವದಲ್ಲಿ ಕೃಷಿಕರಿಗೆ ಪೂರಕವಾದ ಕಾರ್ಯಕ್ರಮ ಅನುಷ್ಠಾನಿಸುವುದು ಉತ್ತಮ ಸಂಗತಿ. ಆಳ್ವಪಾರ್ಮ್ಸ್ ನಲ್ಲಿ
ನಡೆದ ಯಂತ್ರಗಳ ಪ್ರಾತ್ಯಕ್ಷಿಕೆ ಶ್ಲಾಘನೀಯ ಪ್ರಯತ್ನ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ನೇಸರ ಯುವಕ ಮಂಡಲದ ಗೌರವಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಸಮಾಜದ ಸರ್ವರ ಅನುಕೂಲಕ್ಕೆ ಪೂರಕವಾಗಿ ಸಂಘಟನೆ ಹತ್ತಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಭವಿಷ್ಯದಲ್ಲಿಯು ಇನ್ನಷ್ಟು ಯೋಚನೆಗಳಿದ್ದು, ಅದನ್ನು ಕಾರ್ಯರೂಪಕ್ಕೆ ತರಲಾಗುವುದು. ಆಳ್ವಪಾರ್ಮ್ಸ್ ನ ಸಹಯೋಗದಲ್ಲಿ ನಡೆದ ಕೃಷಿ ಯಂತ್ರಗಳ ಪ್ರಾತ್ಯಕ್ಷಿಕೆ ಒಂದು ಮಾದರಿ ಕಾರ್ಯಕ್ರಮವಾಗಿ ರೂಪುಗೊಳ್ಳಲು ಸರ್ವರ ಸಹಕಾರ ಕಾರಣವಾಗಿದೆ ಎಂದರು.

ಬೆಳ್ಳಾರೆ ಮಂಡಲದ ಮಾಜಿ ಪ್ರಧಾನರು, ಪ್ರಗತಿಪರ ಕೃಷಿಕ ಜಯಸೂರ್ಯ ರೈ ಬೋರಡ್ಕ ಮಾತನಾಡಿ, ಆಧುನಿಕ ಪದ್ಧತಿಯೊಂದಿಗೆ ಕೃಷಿಯನ್ನು ಅವಲಂಬಿಸಿದರೆ ಅದರಿಂದ ಯಶಸ್ಸು ಸಾಧ್ಯವಿದೆ. ಕೃಷಿ ಚಟುವಟಿಕೆ ಸುಲಭವಾಗಿ, ಕಡಿಮೆ ಅವಧಿಯಲ್ಲಿ ಸಾಗಲು ಹೊಸ ಹೊಸ ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಕೃಷಿಕರು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಪೆರುವಾಜೆ ಗ್ರಾ.ಪಂ.ಮಾಜಿ ಸದಸ್ಯ ಉಮೇಶ್ ಕೆಎಂಬಿ ಮಾತನಾಡಿ, ಬಹುತೇಕರು ಕೃಷಿಯನ್ನು ನಂಬಿ ಜೀವನ ನಿರ್ವಹಿಸುತ್ತಿದ್ದಾರೆ. ಇದರಲ್ಲಿ
ಕಷ್ಟ ನಷ್ಟಗಳು ಸಹಜ. ಅದನ್ನು ಮೆಟ್ಟಿ ನಿಲ್ಲಲು ಇಂತಹ ಹೊಸ ಆವಿಷ್ಕಾರಗಳು ಪ್ರಯೋಜನಕಾರಿ ಆಗಿದೆ. ನೇಸರ ಯುವಕ ಮಂಡಲ ಹಾಗೂ ಆಳ್ವಫಾರ್ಮ್ಸನ ಪ್ರಯತ್ನ ಅತ್ಯುತ್ತಮವಾದದು ಎಂದರು.

ಮುಕ್ಕೂರು ಜ್ಯೋತಿ ಯುವಕ ಮಂಡಲ ಇದರ ಮಾಜಿ ಅಧ್ಯಕ್ಷ ಸತ್ಯಪ್ರಸಾದ್ ಕಂಡಿಪ್ಪಾಡಿ ಮಾತನಾಡಿ, ಜನರಿಗೆ ಪ್ರಯೋಜನಕಾರಿ ಆಗುವ ಕಾರ್ಯಕ್ರಮಗಳನ್ನು ಅನುಷ್ಠಾನಿಸುವುದರಿಂದ ಸಂಘಟನೆಗಳು ಸಮಾಜದ ವಿಶ್ವಾಸಕ್ಕೆ ಪಾತ್ರವಾಗುತ್ತದೆ. ಕೃಷಿ ಕಾರ್ಯಕ್ಕೆ ಅನುಕೂಲಕರವಾಗುವ ಯಂತ್ರಗಳ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯ ಪ್ರಯತ್ನ ಉತ್ತಮವಾದದು ಎಂದರು.

ವೇದಿಕೆಯಲ್ಲಿ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಗುಡ್ಡಪ್ಪ ಗೌಡ ಅಡ್ಯತಕಂಡ, ಮುಕ್ಕೂರು-ಪೆರುವಾಜೆ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಕಿರಣ್ ಚಾಮುಂಡಿಮೂಲೆ, ಮುಕ್ಕೂರು ಯುವಸೇನೆ ಅಧ್ಯಕ್ಷ ಸಚಿನ್ ರೈ ಪೂವಾಜೆ, ಕುಂಡಡ್ಕ-ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ ಅಡೀಲು, ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು ಉಪಸ್ಥಿತರಿದ್ದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಸ್ವಾಗತಿಸಿ, ಈ ಅರ್ಥಪೂರ್ಣ ಕಾರ್ಯಕ್ರಮ ಸಂಘಟಿಸಲು ಇದೊಂದು ಉತ್ತಮ ಅವಕಾಶ ಸಿಕ್ಕಿತು. ಪಾಲ್ಗೊಂಡ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.

ಶ್ರಾವ್ಯ ರೈ ಪೂವಾಜೆ ರೈತಗೀತೆ ಹಾಡಿದರು. ನೇಸರ ಯುವಕ ಮಂಡಲ ಅಧ್ಯಕ್ಷ ಪೂವಪ್ಪ ನಾಯ್ಕ ಕೊಂಡೆಪ್ಪಾಡಿ ವಂದಿಸಿದರು. ರಕ್ಷಿತಾ ಅಡ್ಯತಕಂಡ ನಿರೂಪಿಸಿದರು.

ಸಮ್ಮಾನ ಕಾರ್ಯಕ್ರಮ
ಇದೇ ಸಂದರ್ಭದಲ್ಲಿ ಮಿನಿ ಟಿಪ್ಪರ್ ಸಂಶೋಧಕ ಮಂಜುನಾಥನಗರದ ಪುರುಷೋತ್ತಮ ಅವರನ್ನು ಸಮ್ಮಾನಿಸಲಾಯಿತು. ಆಳ್ವಫಾರ್ಮ್ಸ ಯಜಮಾನಿ ಕುಂಬ್ರ ಲಲಿತಾ ಎಸ್.ಆಳ್ವ ಅವರನ್ನು ಗೌರವಿಸಲಾಯಿತು. ಅತಿಥಿಗಳಿಗೆ ಅಡಿಕೆ ಸಸಿ ನೀಡುವ ಮೂಲಕ ವಿಶೇಷ ಗೌರವ ಸಲ್ಲಿಸಲಾಯಿತು. ಬೃಂದಾ ಮುಕ್ಕೂರು ಮತ್ತು ರಕ್ಷಿತ್ ಕಾನಾವು ಸಮ್ಮಾನ ಪತ್ರ ವಾಚಿಸಿದರು.

ಪ್ರಾತ್ಯಕ್ಷಿಕೆ, ಪ್ರದರ್ಶನ
ಅಗ್ರಿ ಡಿಪೋ ಇದರ ಮಾರುಕಟ್ಟೆ ಮುಖ್ಯಸ್ತ ರಾಜರಾಮ ಕಾಡೂರು ಅವರು ಕೃಷಿ ಯಂತ್ರಗಳ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನೀಡಿದರು. ಅಡಿಕೆ ಮರ ಏರುವ ಯಂತ್ರ, ತೆಂಗಿನ ಮರ ಏರುವ ಯಂತ್ರ, ಹುಲ್ಲು ಕತ್ತರಿಸುವ, ಅಡಿಕೆ ಮರದ ಬುಡ ಅಗತೆ ಯಂತ್ರ, ಮಿನಿ ಸ್ಕೂಟಿ ಟಿಪ್ಪರ್, ರಿಕ್ಷಾ ಟಿಪ್ಪರ್ ಇದರ ಪ್ರಾತ್ಯಕ್ಷಿಕೆ ನಡೆಯಿತು. ಕೃಷಿಕರು ಇದರ ಮಾಹಿತಿ ಪಡೆದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!