ರಿಕ್ಷಾದಿಂದ ಬಿದ್ದು ಗಂಭೀರ ಗಾಯಗೊಂಡ ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು ವರದಿಯಾಗಿದೆ.
ದುಗಲಡ್ಕದ ನೀರಬಿದಿರೆ (ಕೊಯಿಕುಳಿ ಶಾಲಾ ಬಳಿ) ನಾರಾಯಣ ಎಂಬವರ ಪತ್ನಿ ಲಲಿತ (40) ಸಂಬಂಧಿಕರಾದ ನಾಗೇಶ ಎಂಬವರ ರಿಕ್ಷಾದಲ್ಲಿ ಸುಳ್ಯಕ್ಕೆ ಬರುತ್ತಿದ್ದಾಗ ಆರ್ತಾಜೆ ಸಮೀಪ ರಿಕ್ಷಾದಿಂದ ರಸ್ತೆಗೆ ಬಿದ್ದರೆಂದೂ ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಫಲಕಾರಿಯಾಗದೇ ಅವರು ಮೃತಪಟ್ಟರೆಂದು ತಿಳಿದು ಬಂದಿದೆ.