




ಮುಹಿಯ್ಯುದ್ದೀನ್ ಜುಮಾ ಮಸೀದಿ ಕುಂಬರ್ಚೋಡು ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ನ.20 ರಂದು ಕುಂಬರ್ಚೋಡು ಮದರಸ ಸಭಾಂಗಣದಲ್ಲಿ ನಡೆಯಿತು. ದುವಾ ಹಾಗೂ ಉದ್ಘಾಟನೆಯನ್ನು ಆಶ್ರಫ್ ಮುಸ್ಲಿಯಾರ್ ನೇರವೆರಿಸಿದರು.
ವೇದಿಕೆಯಲ್ಲಿ ಸೈದಾಲಿ ಹಾಜಿ, ಅಹಮದ್ ಹಾಜಿ, ಅಬುಬಕ್ಕರ್, ಅಬ್ದುಲ್ ಕರಿಮ್ ಬಿ ಎಮ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮುಂದಿನ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಹನೀಫ್ ಹಾಜಿ ಕುಂಬರ್ಚೋಡು, ಉಪಾಧ್ಯಕ್ಷರಾಗಿ ಅಬ್ದುಲ್ ಕರೀಮ್ ಬಿ.ಎಮ್., ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಅಕ್ಕರೆ, ಜೊತೆ ಕಾರ್ಯದರ್ಶಿಗಳಾಗಿ ಸಿರಾಜ್ ಹಾಗೂ ನವಾಝ್, ಕೋಶಾಧಿಕಾರಿ ಯಾಗಿ ಕುಂಙ್ಞಮು ಕೆ.ಎಮ್., ಸದಸ್ಯರುಗಳಾಗಿ ಅಬ್ದುಲ್ ಖಾದರ್ ಹಾಜಿ, ಮೊಹಿದಿನ್ ಖಾರ್ಲೆ, ಝಕರಿಯ,ಆಶ್ರಫ್ ಪ್ರಗತಿ, ಅಬ್ಬಾಸ್ ಅಕ್ಕರೆ ರವರನ್ನು ಆಯ್ಕೆಮಾಡಲಾಯಿತು. ಸಲಹಾ ಸಮಿತಿ ಸದಸ್ಯರುಗಳಾಗಿ ಸೈದಾಲಿ ಹಾಜಿ, ಅಹಮದ್ ಹಾಜಿ, ಅಬುಬಕ್ಕರ್ ಕೆ.ಪಿ., ಹಾಗೂ ಆಶ್ರಫ್ ಮುಸ್ಲಿಯಾರ್ ಅವರುಗಳನ್ನು ಆಯ್ಕೆ ಮಾಡಲಾಯಿತು.