
ಶ್ರೀ ಕಪಿಲೇಶ್ವರ ಸಿಂಗಾರಿ ಮೇಳ ಚಾರ್ವಕ ಕಳೆದ ಒಂದೂವರೆ ವರ್ಷದಿಂದ ರಾಜ್ಯಾದ್ಯಂತ ಅತ್ಯುತ್ತಮ ಕಲಾಪ್ರದರ್ಶನ ನೀಡುತ್ತಿದ್ದು 50ಕ್ಕಿಂತಲೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರ ಮನೆ ಮಾತಾಗಿದೆ. ಕೋವಿಡ್ ಮಹಾಮಾರಿಯಿಂದಾಗಿ ಕೆಲವು ತಿಂಗಳಿನಿಂದ ಕಲಾವಿದರಿಗೆ ರಜೆ ನೀಡಲಾಗಿದ್ದು ಇದೀಗ ಕಾರ್ಯಕ್ರಮ ನೀಡಲು ಸಿದ್ಧವಾಗಿದೆ. ಶ್ರೀ ಕಪಿಲೇಶ್ವರ ಸಿಂಗಾರಿ ಮೇಳದ ಜೊತೆಗೆ ಮಹಿಳಾ ಸಿಂಗಾರಿ ಮೇಳ ಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು ಈ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ತರಬೇತಿ ನೀಡಲಾಗುತ್ತಿದೆ. ತಂಡದಲ್ಲಿ 20 ಜನ ಮಹಿಳಾ ಕಲಾವಿದರಿದ್ದು ಕೇರಳದ ಖ್ಯಾತ ಚೆಂಡೆವಾದಕ ಶ್ರೀ ಚಂದ್ರನ್ ರವರ ಮಾರ್ಗದರ್ಶನದಲ್ಲಿ ಪ್ರತಿದಿನ ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡ ಇಲ್ಲಿ ತರಬೇತಿ ನೀಡಲಾಗುತ್ತಿದೆ. ಮಹಿಳಾ ಸಿಂಗಾರಿ ಮೇಳದ ಗೌರವಾಧ್ಯಕ್ಷೆ ಡಾ| ಆಶಾ ಅಭಿಕಾರ್ ಹಾಗೂ ಸಿಂಗಾರಿ ಮೇಳದ ಉಸ್ತುವಾರಿ ಕು| ಶುಭ.ಡಿ ಸಹಕರಿಸುತ್ತಿದ್ದಾರೆ. ಶ್ರೀ ಕಪಿಲೇಶ್ವರ ಸಿಂಗಾರಿ ಮೇಳದ ಪುರುಷ ಕಲಾವಿದರೂ ತರಬೇತಿಯಲ್ಲಿ ಸಹಕರಿಸುತ್ತಿದ್ದು ಡಿಸೆಂಬರ್ 2ನೇ ವಾರದಲ್ಲಿ ಕಪಿಲೇಶ್ವರ ದೇವಸ್ಥಾನದಲ್ಲಿ ರಂಗಪ್ರವೇಶಕ್ಕೆ ಸಿದ್ಧತೆ ನಡೆದಿದೆ ಎಂದು ಸಿಂಗಾರಿ ಮೇಳದ ವ್ಯವಸ್ಥಾಪಕರಾದ ಶಿವಪ್ರಸಾದ್ ಬಾರೆಂಗಳರವರು ಮಾಹಿತಿ ನೀಡಿದ್ದಾರೆ.