ಅಕ್ರಮ ಸಕ್ರಮದಡಿ ಜಾಗ ಮಂಜೂರಾತಿ ಮತ್ತು ಸರಕಾರದ ವೈಯಕ್ತಿಕ ಯೋಜನೆಗಳ ಅನುಷ್ಠಾನದ ಸಭೆ, ಮನೆ-ಮನೆ ಆಸರೆ ವಿವಿಧ ಯೋಜನೆಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಇಂದು ಗುತ್ತಿಗಾರು ಪ.ವರ್ಗದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕಿನ ಶಾಸಕರು ಹಾಗೂ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ಎಸ್.ಅಂಗಾರ ವಹಿಸಿ, ಅಕ್ರಮ ಸಕ್ರಮ ಯೋಜನೆಯ ಕಡತ ವಿಲೇವಾರಿಯ ಬಗ್ಗೆ ಜನರಿಗೆ ಮಾಹಿತಿ ತಿಳಿಸಿ ಹಕ್ಕುಪತ್ರ ವಿತರಿಸಿದರು. ಕಾರ್ಯಕ್ರಮದಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಸುಳ್ಯ ತಾಲೂಕು ತಹಶೀಲ್ದಾರ್ ಅನಂತಶಂಕರ, ರಾಕೇಶ್ ರೈ ಕೆಡಿಂಜಿ, ಶ್ರೀಮತಿ ಯಶೋಧ ಬಾಳೆಗುಡ್ಡೆ, ಶ್ರೀಮತಿ ಗುಣವತಿ ಕೊಲ್ಲಂತ್ತಡ್ಕ ಸಭೆಯಲ್ಲಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿಯ ಸದಸ್ಯರು ಊರಿನ ಜನರು ಉಪಸ್ಥಿತರಿದ್ದರು.ಅನುಷ್ಠಾನದ ಸಭೆಯಲ್ಲಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ,ತಾ.ಪಂ. ಮಾಜಿ ಅಧ್ಯಕ್ಷ ಮುಳಿಯ ಕೇಶವ ಭಟ್ ,ಗ್ರಾ.ಪಂ ಮಾಜಿ ಅಧ್ಯಕ್ಷ ಅಚ್ಚುತ ಗುತ್ತಿಗಾರು ,ಮಾಜಿ ಗ್ರಾ.ಪಂ ಸದಸ್ಯರು ,ಕಂದಾಯ ಇಲಾಖೆ ಅಧಿಕಾರಿಗಳು ,ಅರಣ್ಯಾಧಿಕಾರಿಗಳು, ಫಲಾನುಭವಿಗಳು , ಗ್ರಾಮಸ್ಥರು ಉಪಸ್ಥಿತರಿದ್ದರು, ವೆಂಕಟ್ ವಳಲಂಬೆ ಸ್ವಾಗತಿಸಿ, ಲೋಕೇಶ್ವರ.ಡಿ.ಆರ್ ವಂದಿಸಿದರು. ಶಶಿಧರ ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ವರದಿ : ರಂಜಿತ್ ಅಂಬೆಕಲ್ಲು