ಅಖಿಲ ಭಾರತ ರೈತರ ಸಂಘರ್ಷ ಸಮನ್ವಯ ಸಮಿತಿ, ರೈತ ದಲಿತ ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದಲಿತ ಕಾರ್ಮಿಕ ಹಾಗೂ ಜನ ವಿರೋಧಿ ಮಸೂದೆಗಳನ್ನು ಆಗ್ರಹಿಸಿ ಭಾರತೀಯ ಕೃಷಿ ಪರಂಪರೆ ಹಾಗೂ ಸಂಪತ್ತನ್ನು ಉಳಿಸುವಂತೆ ಒತ್ತಾಯಿಸಿ ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ವಾಹನ ಜಾಥಾ ಹಾಗೂ ಬಹಿರಂಗ ಸಭೆಗಳಿಗೆ ನವಂಬರ್ 18 ರಂದು ಕಲ್ಲುಗುಂಡಿಯಿಂದ ಚಾಲನೆ ನೀಡಲಾಯಿತು.
ಈ ಜಾಥದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು, ಮತ್ತು ಎಐಟಿಯುಸಿ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ,ದಲಿತ ಸಂಘರ್ಷ ಸಮಿತಿ, ಬಿ ಕೃಷ್ಣಪ್ಪ ಸ್ಥಾಪಿತ ದಲಿತ ಸೇವಾ ಸಮಿತಿ, ಜಾತ್ಯತೀತ ಜನತಾದಳ, ಕಾಂಗ್ರೆಸ್ ಪಕ್ಷ ಇವುಗಳ ಜಂಟಿ ಆಶ್ರಯದಲ್ಲಿ ಚಾಲನೆ ನೀಡಲಾಯಿತು. ಈ ಜಾತವು ಕಲ್ಲು ಗುಂಡಿಯಿಂದ ಹೊರಟು ಮಂಗಳೂರಿಗೆ ಸುಮಾರು 5 ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಚರಿಸಿ ನವೆಂಬರ್ 22ರಂದು ಮಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ. ಜಿಲ್ಲೆಯ ಸುಮಾರು 24 ಕೇಂದ್ರಗಳಲ್ಲಿ ಬಹಿರಂಗ ಸಭೆಗಳು ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಮತ್ತು ಜನ ವಿರೋಧಿ ಮಸೂದೆಯನ್ನು ಹಿಂಪಡೆಯುವಂತೆ ಆಗ್ರಹಿಸಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣ ವಿನಯಚಂದ್ರ ಕಲ್ಲುಗುಂಡಿಯಲ್ಲಿ ಉದ್ಘಾಟಿಸಿದರು. ಭಾರತ ದೇಶವು ಕೃಷಿ-ಆಧಾರಿತ ದೇಶವಾಗಿದ್ದು ನಮ್ಮ ದೇಶದಲ್ಲಿ ಸುಮಾರು ಶೇಕಡಾ 66ರ ಜನ ನೇರವಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲಿ ಶೇಕಡ 80 ರೈತರು ಸಣ್ಣ ಹಾಗೂ ಅತಿಸಣ್ಣ ಹಿಡುವಳಿದಾರರಾಗಿದ್ದು ಕೃಷಿ ಕೂಲಿ ಕಾರ್ಮಿಕರು ಸಣ್ಣ ವ್ಯಾಪಾರಿಗಳು ವಾಹನ ಚಾಲಕರು ಹಾಗೂ ಇತರ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ದೇಶದ 135 ಕೋಟಿ ಜನತೆ ಹಾಗೂ ಸಕಲ ಜೀವಿಗಳಿಗೆ ಅಗತ್ಯವಿರುವ ಆಹಾರವನ್ನು ಮಾರುಕಟ್ಟೆ ಕುಸಿತ ಪ್ರಾಕೃತಿಕ ವಿಕೋಪ ಮುಂತಾದ ಸಂದರ್ಭದಲ್ಲಿ ರೈತರು ಧೈರ್ಯವನ್ನು ಕೆಡದೆ ತಮ್ಮ ಉತ್ಪಾದನೆಯನ್ನು ಮಾಡಿಕೊಂಡು ಬಂದಿದ್ದಾರೆ. ಕೊರೋನಾ ದಂತಹ ಸಂಕಷ್ಟ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ತಂದಿರುವ ಮಸೂದೆಗಳು ದೇಶದ ರೈತರ ಹಾಗೂ ದಲಿತ ಜನಾಂಗದವರ, ಕಾರ್ಮಿಕರ, ಸಾಮಾನ್ಯ ಜನತೆಯ ಮೇಲೆ ಬಹಳಷ್ಟು ದುಷ್ಪರಿಣಾಮಗಳು ಬೀರಲಿದೆ ಎಂದು, ದೇಶಿಯ ಸಂಪತ್ತು ಕಾರ್ಪೊರೇಟ್ ಕಂಪನಿಗಳ ಪಾಲಾಗುವ ಎಲ್ಲಾ ಸಾಧ್ಯತೆಗಳು ಎದ್ದು ಕಾರ್ಮಿಕ ವಿರೋಧಿ ಮಸೂದೆ ರೈತ ವಿರೋಧಿ ಮಸೂದೆ ಗಳಿಂದಾಗಿ ಭೂರಹಿತರಿಗೆ ದಲಿತರಿಗೆ ಭೂಮಿ ಮತ್ತು ಉದ್ಯೋಗ ನೀಡುವ ಹೆಬ್ಬಾಗಿಲನ್ನು ಮುಚ್ಚಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ಕೃಷಿ ಪರಂಪರೆ ಹಾಗೂ ಸಂಪತ್ತನ್ನು ಉಳಿಸಲು ಈ ಜಾಥಾದ ಮೂಲಕ ಜನತೆಗೆ ಮನದಟ್ಟು ಮಾಡುವ ಪ್ರಯತ್ನ ಎಂದರು.
ಕರ್ನಾಟಕ ರಾಜ್ಯ ರೈತ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಾಗಿ ಲಾರಿಯನ್ನು ಬಳಸಲಾಗಿದ್ದು ಈ ವೇದಿಕೆಯಲ್ಲಿ ಕಾರ್ಮಿಕ ಮುಖಂಡ ಕೆಪಿ ಜೋನಿ ಕಲ್ಲುಗುಂಡಿ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಲ್ಡ್ ಪ್ರಕಾಶ್ ಫೆರ್ನಾಂಡಿಸ್, ಸುಳ್ಯ ತಾಲೂಕು ಸಮಿತಿ ಗೌರವಾಧ್ಯಕ್ಷ ಪದ್ಮನಾಭ ಗೌಡ ನೂಜಾಲು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಪಾದೆಕಲ್ಲು, ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು,ಜಿಲ್ಲಾ ಸಮಿತಿ ಉಪಾಧ್ಯಕ್ಷ ದಿವಾಕರ ಪೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರ ಭಟ್ ಬಡಿಲ, ಜೆಡಿಎಸ್ ಪಕ್ಷದ ಮುಖಂಡ ಎಂಬಿ ಸದಾಶಿವ,ಕೆ ಟಿ ಸಿ ಸಿ ಮಾಜಿ ಕಾರ್ಯದರ್ಶಿ ವೆಂಕಪ್ಪ, ಕಾಂಗ್ರೆಸ್ ಪಕ್ಷದ ನಾಯಕ ಸೋಮಶೇಖರ್ ಕೊಯಿಂಗಾಜೆ, ಜಿಕೆ ಹಮೀದ್, ಗೌಡ,ಎ.ಎ.ಪಿ ಪಕ್ಷದ ಮುಖಂಡ ಅಶೋಕ್ ಎಡಮಲೆ, ಮೊದಲಾದವರು ಉಪಸ್ಥಿತರಿದ್ದರು. ನಂತರ ಸುಳ್ಯ ಮಾರ್ಗವಾಗಿ ಬಂದ ಜಾಥಾ ಕಾರ್ಯಕ್ರಮ ಖಾಸಗಿ ಬಸ್ ನಿಲ್ದಾಣದಲ್ಲಿ ಬಹಿರಂಗ ಸಭೆಯನ್ನು ನಡೆಸಿತು. ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಜಯಪ್ರಕಾಶ್ ರೈ, ಪ್ರಧಾನ ಕಾರ್ಯದರ್ಶಿಗಳಾದ ಗೋಕುಲ್ ದಾಸ್, ಧರ್ಮಪಾಲ ಕೊಯಿಂಗಾಜೆ, ಮುಖಂಡರುಗಳಾದ ಎಸ್ ಸಂಸುದ್ದೀನ್, ನಂದರಾಜ್ ಸಂಕೇಶ್, ಆನಂದ ಬೆಳ್ಳಾರೆ, ಸಚಿನ್ ರಾಜ್ ಶೆಟ್ಟಿ, ಶರೀಫ್ ಕಂಠಿ, ಶಾಫೀ ಕುತ್ತಮೊಟ್ಟೆ, ಸತ್ಯಕುಮಾರ್ ಆಡಿಂಜ, ಸುರೇಶ್ ಅಮೈ,ಸಿ ಪಿ ಎಂ ಮುಖಂಡ ರಾಬರ್ಟ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖಂಡರುಗಳು ರೈತ ಮತ್ತು ಜನವಿರೋಧಿ ಮಸೂದೆಗಳನ್ನು ಹಿಂತೆಗೆಯಲು ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಹೋರಾಟಕ್ಕೆ ಬೆಂಬಲವನ್ನು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ವಿವಿಧ ರೈತ ಪರ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು .