ಪುತ್ತೂರು ಕಡೆಯಿಂದ ಸುಳ್ಯದ ಕಡೆಗೆ ಬರುತ್ತಿದ್ದ ಬೈಕ್ ಗೆ ದನ ಅಡ್ಡ ಬಂದ ಪರಿಣಾಮ ಬೈಕ್ ಪಲ್ಟಿ ಹೊಡೆದು ಇಬ್ಬರು ಯುವಕರು ಗಾಯಗೊಂಡ ಘಟನೆ ನಿನ್ನೆ ರಾತ್ರಿ ವರದಿಯಾಗಿದೆ. ಬೈಕ್ ನಲ್ಲಿದ್ದ ಅರಂತೋಡು ಗ್ರಾಮದ ಪಿಂಡಿಮನೆ ಸಂತೋಷ್ ಮತ್ತು ಪ್ರವೀಣ್ ಎಂಬವರು ಗಾಯಗೊಂಡವರು. ಪ್ರವೀಣ್ ಎಂಬವರಿಗೆ ಗಂಭೀರ ಗಾಯಗೊಂಡಿದ್ದು, ಸಂತೋಷ್ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಮಂಗಳೂರಿನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯ ವೆಬ್ಸೈಟ್ ಗಳಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ, ಮರ್ಕಂಜದ ಯುವಕ ಗಂಭೀರ ಎಂದು ವರದಿಯಲ್ಲಿ ತನ್ನ ಹೆಸರನ್ನು ಕೇಳದೆ ಹಾಕಿದ್ದಾರೆ. ಬೈಕನ್ನು ತನ್ನ ಸಂಬಂಧಿಗಳು ತೆಗೆದುಕೊಂಡು ಹೋಗಿದ್ದರು ಎಂದು ಬೈಕ್ ನ ವಾರಸುದಾರ ಮಣಿಪ್ರಸಾದ್ ಅಮರ ಸುದ್ದಿಗೆ ತಿಳಿಸಿದ್ದಾರೆ.