ಸ್ವಾತಂತ್ರ್ಯ ಬಂದ ಬಳಿಕ ಒಂದು ಚಿಕ್ಕ ಸೂಜಿಯಿಂದ ಹಿಡಿದು ದೊಡ್ಡ ದೊಡ್ಡ ಯಂತ್ರಗಳ ವರೆಗೂ ಹೆಚ್ಚಿನ ವಸ್ತುಗಳಿಗೆ ವಿದೇಶ ಗಳನ್ನು ಅವಲಂಬಿಸಬೇಕಾಗಿತ್ತು. ಬಳಿಕ ಸರಕಾರಗಳು ಪ್ರಯತ್ನದಿಂದ ನಮ್ಮ ದೇಶದಲ್ಲೇ ವಿವಿಧ ಕಾರ್ಖಾನೆಗಳು ಹೆಚ್ಚೆಚ್ಚೂ ಬೆಳೆಯತೊಡಗಿತು. ಇದೀಗ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಯವರ ಸರ್ಕಾರದಲ್ಲಿ ಸ್ವದೇಶಿ ವಸ್ತುಗಳ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಇದು ಒಂದು ಉತ್ತಮ ಬೆಳವಣಿಗೆಯಾಗಿದೆ. ಏಕೆಂದರೆ ಸ್ವದೇಶಿ ವಸ್ತುಗಳ ಉತ್ಪಾದನೆ ಹಾಗೂ ಬಳಕೆಯಿಂದ ನಮ್ಮ ದೇಶಕ್ಕೆ ಲಾಭವಾಗುತ್ತದೆ. ಜೊತೆಗೆ ಭಾರತ ದೇಶದ ಅತೀ ದೊಡ್ಡ ಸಾಮಾಜಿಕ ಸಮಸ್ಯೆಗಳಲ್ಲಿ ಒಂದಾದ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಬಹುದು.ಹೇಗೆಂದರೆ ಸ್ವದೇಶಿ ವಸ್ತುಗಳ ಉತ್ಪಾದನೆಯಿಂದ ದೇಶದಲ್ಲಿ ಹೆಚ್ಚಿನ ಜನರಿಗೆ ಉದ್ಯೋಗ ದೊರಕುತ್ತದೆ ಇದರಿಂದ ದೇಶವು ಆರ್ಥಿಕವಾಗಿ ಸಧೃಡವಾಗುತ್ತದೆ.
ಸ್ವದೇಶಿ ವಸ್ತುಗಳ ಉತ್ಪಾದನೆಯಿಂದ ನಾವು ವಸ್ತು ಹಾಗೂ ಯಂತ್ರಗಳು ಹಾಗೂ ಯುದ್ದ ಸಾಮಾಗ್ರಿ ಮುಂತಾದವು ಗಳಿಗಾಗಿ ಬೇರೆ ದೇಶಗಳನ್ನು ಅವಲಂಬಿಸುವುದು ತಪ್ಪುತ್ತದೆ. ಹಾಗೂ ನಮಗೆ ಬೇಕಾದ ವಸ್ತುಗಳನ್ನು ನಾವೇ ಉತ್ಪಾದಿಸಬಹುದು. ಇದು ದೇಶಕ್ಕೆ ಲಾಭದಾಯಕ ವಾಗಿರುತ್ತದೆ.
ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿ ಯವರು ಸ್ವದೇಶಿ ವಸ್ತುಗಳ ಉತ್ಪಾದನೆ ಮತ್ತು ತಯಾರಿಕೆಗೆ ಹೆಚ್ಚಿನ ಒತ್ತು ಕೊಟ್ಟು ಭಾರತವು ಭವಿಷ್ಯದಲ್ಲಿ ಯಾವುದೇ ವಸ್ತು ಹಾಗೂ ಯಂತ್ರಗಳಿಗಾಗಿ ಬೇರೆ ದೇಶಗಳನ್ನು ಅವಲಂಬಿಸದೇ ನಮ್ಮ ದೇಶಕ್ಕೆ ಬೇಕಾದ ವಸ್ತುಗಳನ್ನು ನಾವೇ ಉತ್ಪಾದಿಸಿಕೊಂಡು ಬಳಸುವಂತೆ ಮಾಡಿ ಭಾರತವು ಯಾವುದೇ ದೇಶವನ್ನು ಅವಲಂಬಿಸದೇ ಮುಂದುವರಿದ ರಾಷ್ಟ್ರಗಳಲ್ಲಿ ಒಂದಾಗಬೇಕು ಎಂಬ ದೂರದೃಷ್ಟಿ ಯಿಂದ ಈ ಸ್ವದೇಶಿ ವಸ್ತುಗಳ ಉತ್ಪಾದನೆ ಮತ್ತು ತಯಾರಿಕೆಗೆ ಪ್ರಾಶಸ್ತ್ಯ ನೀಡಿದ್ದಾರೆ.
ನಮ್ಮ ದೇಶ ಭಾರತವು ಸ್ವಾತಂತ್ರ್ಯ ಸಿಕ್ಕಿದಾಗಿನಿಂದ ಇಲ್ಲಿಯವರೆಗೂ ಮುಂದುವರಿಯುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿಯೇ ಇದೆ. ಆದರೆ ಶ್ರೀ ನರೇಂದ್ರ ಮೋದಿಯವರ ಆಡಳಿತದ ಅವಧಿಯಲ್ಲಿ ಭಾರತದ ಜನರಲ್ಲಿ ಭಾರತವು ಮುಂದುವರಿದ ದೇಶಗಳ ಪಟ್ಟಿಯಲ್ಲಿ ಸೇರಲಿದೆ ಎಂಬ ವಿಶ್ವಾಸ ಮೂಡಿಸಿದೆ. ಕಾರಣ ಅವರ ಪ್ರತಿಯೊಂದು ಯೋಜನೆಗಳು ಜನಪರವಾಗಿರುತ್ತದೆ. ಜನರಿಗೆ ಉಪಯುಕ್ತವಾಗುವ ಅಂತಹಾ ಯೋಜನೆಗಳಲ್ಲಿ ಈ ಸ್ವದೇಶಿ ವಸ್ತುಗಳ ಉತ್ಪಾದನೆ ಹಾಗೂ ಬಳಕೆ ಯೂ ಒಂದಾಗಿದೆ.
ಆದ್ದರಿಂದ ಈ ಸ್ವದೇಶಿ ವಸ್ತುಗಳ ಉತ್ಪಾದನೆ ಮತ್ತು ತಯಾರಿಕೆ ಗೆ ನಾವು ಕೂಡ ಒತ್ತು ಕೊಡೋಣ, ವಿದೇಶಿ ವಸ್ತುಗಳನ್ನು ಬಹಿಷ್ಕರಿಸೋಣ. ಭವ್ಯ ಭಾರತವು ಭವಿಷ್ಯದಲ್ಲಿ ಸಧೃಡ ರಾಷ್ಟ್ರವಾಗಿ ಬೆಳೆಯಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ.
✍ಉಲ್ಲಾಸ್ ಕಜ್ಜೋಡಿ