ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ ಮತ್ತು ಗರುಡ ಯುವಕ ಮಂಡಲ (ರಿ) ಚೊಕ್ಕಾಡಿ ಇದರ ಜಂಟಿ ಆಶ್ರಯದಲ್ಲಿ ನ.15 ರಂದು ಸಂಜೆ ಅಕ್ಕೋಜಿಪಾಲ್ ಕಾಲೋನಿಯಲ್ಲಿ ವಸ್ತ್ರದಾನ ಮತ್ತು ದೀಪಾವಳಿ ಆಚರಣೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಗರುಡ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷರಾದ ಶ್ರೀಧರ್ ಕರ್ಮಾಜೆಯವರು ಭಾಗವಹಿಸಿದ್ದರು, ಸಭಾಧ್ಯಕ್ಷತೆಯನ್ನು ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಅಧ್ಯಕ್ಷರಾದ ಶ್ರೀ ಅನಿಲ್ ಪೂಜಾರಿ ಮನೆ ವಹಿಸಿದ್ದರು.
ವೇದಿಕೆಯಲ್ಲಿ ಗರುಡ ಯುವಕ ಮಂಡಲದ ಅಧ್ಯಕ್ಷರಾದ ಹರೀಶ್ ನೆಕ್ರಾಜೆ ಮತ್ತು ನಿಕಟ ಪೂರ್ವಾಧ್ಯಕ್ಷರಾದ ಮುರಳಿ ನಳಿಯಾರು ಮತ್ತು ಶರಣ್ ಕರ್ಮಾಜೆ ಆಸೀನರಾಗಿದ್ದರು. ಸಭಾಕಾರ್ಯಕ್ರಮವನ್ನು ರಕ್ಷತ್ ಕರ್ಮಾಜೆ ಸ್ವಾಗತಿಸಿ, ಸತೀಶ್ ಪಿಲಿಕಜೆ ವಂದಿಸಿ, ಮನೋಜ್ ಪಡ್ಪು ಕಾರ್ಯಕ್ರಮ ನಿರೂಪಿಸಿದರು. ಕಾಲೋನಿಯ ಸುಮಾರು 23 ಮನೆಯ ಮಕ್ಕಳಿಗೆ ವಸ್ತ್ರವನ್ನು ಮತ್ತು ಹಿರಿಯರಿಗೆ ಶಾಲು ನೀಡಲಾಯಿತು ಕಾಲೋನಿಯ ಎಲ್ಲಾ ವ್ಯಕ್ತಿಗಳೊಂದಿಗೆ ಸೇರಿ ದೀಪ ಉರಿಸಿ, ಹಸಿರು ಪಟಾಕಿ ಹಚ್ಚಿ, ದೀಪಾವಳಿ ಆಚರಿಸಲಾಯಿತು. ಎಲ್ಲರೊಂದಿಗೆ ಸಹಭೋಜನ ನಡೆಯಿತು.