Ad Widget

ದೀಪಗಳ ಹಬ್ಬ….. ದೀಪಾವಳಿ

ಸಾಲು ಸಾಲು ದೀಪಗಳಿಂದ ದೀಪಗಳನ್ನು ಹಚ್ಚಿ ಸಂಭ್ರಮಿಸುವ ದಿನ. ಅಜ್ಞಾನದಿಂದ ಸುಜ್ಞಾನದೆಡೆಗೆ, ಅಂಧಕಾರದಿಂದ ಬೆಳಕಿನೆಡೆಗೆ ಸಾಗುವ ದಿನವೇ ದೀಪಾವಳಿ ಹಬ್ಬ ಎಂದರೆ ತಪ್ಪಾಗಲಾರದು. ಮನೆಯನ್ನು, ಮನಗಳನ್ನು ಬೆಳಗುತ್ತಾ ಸಮಗ್ರ ಕುಟುಂಬವನ್ನು ತನ್ನ ಪರಿಸರದ ಜತೆ ಬೆಸೆದು ಸಂಭ್ರಮವನ್ನು ಹೆಚ್ಚಿಸುವಂಥ ಶುಭ ದಿನ. ಕತ್ತಲು ಕಳೆದು ಬಾಳಲ್ಲಿ ಬೆಳಕು ಮೂಡಿಸುವ ದೀಪಾವಳಿಗೆ ದೀಪ + ಅವಳಿ, ಅಂದರೆ ಜೋಡಿ ದೀಪ ಅಥವಾ ದೀಪಗಳ ಸಾಲು ಎಂಬ ಅರ್ಥವೂ ಇದೆ.

. . . . . . .

ಭಾರತದಲ್ಲಿ ಸಾಂಪ್ರದಾಯಿಕವಾಗಿ ಪಂಚಾಂಗ ಚಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ – ಈ ದಿನಗಳಲ್ಲಿ ದೀಪಾವಳಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು, ದೀಪಾವಳಿಯನ್ನು ಆಚರಣೆ ಮಾಡುತ್ತೇವೆ.
ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ.
ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.ಆದರೆ ಈ ವರ್ಷ ಕೊರೊನಾ ವೈರಸ್ (ಕೊವಿಡ್-19) ಎಂಬ ಮಾರಕ ಕಾಯಿಲೆಯು ಬೆಳಕಿನ ಹಬ್ಬ ದೀಪಾವಳಿಯ ಮೇಲೆ ತನ್ನ ಕರಿನೆರಳನ್ನು ಒಡ್ಡಿದೆ. 80 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಕೋವಿಡ್-19 ಸೋಂಕು ತಗುಲಿದ್ದು, ಒಂದು ಅಂದಾಜಿನ ಸಮೀಕ್ಷೆಯ ಪ್ರಕಾರ ಇಂದು ಸುಮಾರು 1.26 ಲಕ್ಷಕ್ಕೂ ಹೆಚ್ಚು ಮಂದಿ ವೈರಸ್ ಗೆ ಬಲಿಯಾಗಿದ್ದಾರೆ. ಹೀಗಾಗಿ ಪ್ರತಿವರ್ಷದಂತೆ ಈ ಬಾರಿ ಬೆಳಕಿನ ಹಬ್ಬ ದೀಪಾವಳಿಯಲ್ಲಿ ಸಡಗರ-ಸಂಭ್ರಮಕ್ಕೆ ಸ್ವಲ್ಪ ಮಟ್ಟಿನಲ್ಲಿ ಬ್ರೇಕ್ ಬಿದ್ದಿದೆ.

ದೀಪಾವಳಿಯಂದು ಪ್ರತಿಯೊಬ್ಬರೂ ತಮ್ಮ ಮನೆಗಳನ್ನು ಅಲಂಕರಿಸುತ್ತಾರೆ, ಸಂಪತ್ತಿನ ದೇವತೆ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ಕುಟುಂಬಸ್ಥರು, ಸ್ನೇಹಿತರನ್ನು ಭೇಟಿ ಮಾಡಿ ಶುಭಾಶಯ ಸಲ್ಲಿಸಿ, ಹಬ್ಬದೂಟವನ್ನು ಸವಿದು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ.ಅಲ್ಲಿದೆ ದೀಪಾವಳಿಯ ಸಮಯದಲ್ಲಿ ನಡೆಯುವ ಇತರ ವಿಶೇಷ ಗಳೆಂದರೆ ಆಯುಧಪೂಜೆ ಅಂಗಡಿ ಪೂಜೆ(ಲಕ್ಷ್ಮಿ ಪೂಜೆ), ಹಾಗೆಯೇ ಗೋಪೂಜೆಯನ್ನು ಹೆಸರಿಸಬಹುದು.

ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು.
ಹಬ್ಬಗಳು ನಮ್ಮ ಪೂರ್ವಿಕರ ಸುಂದರ ಪರಿಕಲ್ಪನೆಗಳು. ಅಂದಿನ ದೀಪಾವಳಿಯನ್ನು ನೆನೆಯುವುದೇ ಒಂದು ಅನುಭವ. ಆದರೆ ಆಧುನಿಕತೆಯ ಗಾಳಿಗೆ ಮೈಯೊಡ್ಡಿರುವ ನಾವು-ನೀವು ಹಿಂದಿನಂತೆ ದೀಪಾವಳಿಯನ್ನು ಆಚರಿಸುತ್ತಿದ್ದೇವೆಯೇ?ಯಾರೋ ಕಳುಹಿಸಿದ ಶುಭಾಶಯ ಸಂದೇಶಗಳನ್ನು ರವಾನೆ ಮಾಡಿ ಕೈ ತೊಳೆದು ಬಿಡುತ್ತೇವೆ. ಬ್ಯುಸಿ ಶೆಡ್ಯೂಲ್ಗಳ ನಡುವೆ ಆಚರಣೆಯನ್ನು ಕೇವಲ ತೋರಿಕೆಗೆ ಪ್ರಸ್ತುತ ಪಡಿಸುವುದು ಇಂದಿನ ನಮ್ಮ ಜಾಯಮಾನ ವಾಗಿದೆ ಎಂದರೆ ಸುಳ್ಳಾಗದು. ದೀಪಾವಳಿಯ ಆಚರಣೆ, ಮಹತ್ವ, ವಿದಿ ವಿಧಾನಗಳನ್ನು ನಮ್ಮಮಕ್ಕಳಿಗೆ ನಾವು ತಿಳಿಹೇಳಿದಾಗ ಅದರ ಪ್ರಾಮುಖ್ಯತೆ ನಮ್ಮ ಮುಂದಿನ ಪೀಳಿಗೆಗೆ ದಾರಿ ದೀಪವಾಗುತ್ತದೆ.

ನಾವು ಹಚ್ಚುವ ದೀಪದ ಬೆಳಕಿನಿಂದ ನಮ್ಮೊಳಗಿನ ಅಜ್ಞಾನ, ಅವಿವೇಕ, ದುಷ್ಟ ಗುಣಗಳು ನಾಶವಾಗಿ ಸದ್ಗುಣ ಗಳು ಹೆಚ್ಚಲಿ. ಎಲ್ಲೆಡೆ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ. ಸಾಮಾಜಿಕ ಅಂತರ ಕಾಯ್ದುಕೊಂಡು, ದೀಪಾವಳಿ ಹಬ್ಬವನ್ನು ಆಚರಿಸೋಣ…. ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು.‌‌‌…

ಬರಹ
ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!