Ad Widget

ತೊಡಿಕಾನ ದೇವರಗುಂಡಿ ಪಾವಿತ್ರ್ಯತೆ ಉಳಿಸುವ ಬಗ್ಗೆ ಶಾಸಕ ಬೋಪಯ್ಯರಿಗೆ ವಿ.ಎಚ್.ಪಿ ಮನವಿ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ವತಿಯಿಂದ ತೊಡಿಕಾನ ದೇವರಗುಂಡಿ ಪುಣ್ಯಕ್ಷೇತ್ರದ ಪಾವಿತ್ರ್ಯತೆ ಉಳಿಯುವ ದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕೆಂದು ವಿರಾಜಪೇಟೆ ಶಾಸಕರಾದ ಕೆ ಜಿ ಬೋಪಯ್ಯ ರಿಗೆ ಮನವಿ ನೀಡಲಾಯಿತು. ದೇವರಗುಂಡಿ ಪ್ರದೇಶದಲ್ಲಿ ಅಶ್ಲೀಲ ಚಿತ್ರೀಕರಣ ವಿಚಾರಕ್ಕೆ ಸಂಬಂಧಪಟ್ಟು, ತೊಡಿಕಾನ ದೇವಸ್ಥಾನ ಪರಿಸರದಲ್ಲಿ ಇನ್ನೂ ಮುಂದೆ ಈ ರೀತಿಯ ಪ್ರಕರಣ ಗಳು ನಡೆಯಬಾರದು ಈ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ ಪೈಕ ಪ್ರಧಾನ ಕಾರ್ಯದರ್ಶಿ ರಂಜಿತ್ ಸುಳ್ಯ, ಬಜರಂಗದಳ ಜಿಲ್ಲಾ ಸಹ ಸಂಯೋಜಕ್ ಲತೀಶ್ ಗುಂಡ್ಯ, ಪ್ರಖಂಡ ಸುರಕ್ಷಾ ಪ್ರಮುಖ್ ಸನತ್, ವರ್ಷಿತ್, ರಾಜೇಂದ್ರ ಆಚಾರ್ಯ ಉಪಸ್ಥಿತರಿದ್ದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!