
ಕಮಿಲದಲ್ಲಿ ನ.13 ರಂದು ಸಂಜೆ ಸುರಿದ ಭಾರಿ ಗಾಳಿ ಮಳೆ ಗುತ್ತಿಗಾರು ಕಮಿಲ ಬಳ್ಪ ರಸ್ತೆಗೆ ಬೃಹತ್ ಗಾತ್ರದ ಮರ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿತ್ತು. ತಕ್ಷಣವೇ ಸ್ಪಂದಿಸಿದ ಕಮಿಲದ ನಾಗರಿಕ ಹೋರಾಟ ಕ್ರಿಯಾ ಸಮಿತಿ ಸದಸ್ಯರು ಸ್ಥಳೀಯ ಹಿಟಾಚಿ ಯಂತ್ರ ಬಳಸಿ ಮರ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಈ ಸಂದರ್ಭ ನಾಗರಿಕ ಸಮಿತಿಯ ಹರ್ಷಿತ್ ಕಾಂತಿಲ, ಯುವರಾಜ ಹೊಳೆಕೆರೆ, ವೆಂಕಟರಮಣ ಕಿನ್ನಿಕುಮ್ರಿ, ರಘುವೀರ ಮೊಗ್ರ, ಸುಂದರ ಗೌಡ ಕಮಿಲ , ಭರತ್ ಕಾಂತಿಲ, ಪವನ್ ಕಾಂತಿಲ, ನಿರಂಜನ ಕಾಂತಿಲ, ಪುನೀತ್ ಕಮಿಲ, ನಿಖಿಲ್ ಬರೆಪ್ಪಾಡಿ ಮೊದಲಾದವರು ಇದ್ದರು.