
ಜ್ಞಾನ ಮಂದಾರ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ನೀಡಲಾಗುವ 2021ಸಾಲಿನ ಸಮಾಜರತ್ನ ರಾಜ್ಯ ಪ್ರಶಸ್ತಿಗೆ ಕೊಡುಗೈ ದಾನಿ ಹಾಗೂ ಪ್ರಖ್ಯಾತ ಉದ್ಯಮಿ ಗೋಪಾಲಕೃಷ್ಣ ಕರೋಡಿಯವರು ಭಾಜನರಾಗಿದ್ದಾರೆ. ಸುಳ್ಯ ತಾಲೂಕು ಬಾಲಾವಲಿಕರ್ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿರುವ ಕರೋಡಿಯವರ ಸಾಮಾಜಿಕ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ . ಜ .17 ರಂದು ಮಂಗಳೂರಿನಲ್ಲಿ ನಡೆಯಲಿರು ಜ್ಞಾನಮಂದಾರ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ .