ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಲುನಾಡ್ (ರಿ), ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಕಳಂಜ ಹಾಗೂ ಕಲಾ ವಿಕಾಸ (ರಿ) ಕಳಂಜ ಇವರ ಜಂಟಿ ಆಶ್ರಯದಲ್ಲಿ ನಡೆದ ‘ಬಲೆ ತುಲು ಲಿಪಿ ಕಲ್ಪುಗ’ ಕಾರ್ಯಾಗಾರ ಹಾಗೂ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ವತಿಯಿಂದ ಕಳೆದೆರಡು ತಿಂಗಳಿನಿಂದ ನಡೆದು ಕೊಂಡು ಬಂದಿದ್ದ ಭಜನಾ ಶಿಬಿರದ ಸಮಾರೋಪ ಹಾಗೂ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ನ.7 ರಂದು ಕಳಂಜ ವಿಷ್ಣುಮೂರ್ತಿ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆ ಸುಳ್ಯದ ಅಧ್ಯಕ್ಷರಾದ ವಿಶ್ವನಾಥ ರೈ ಕಳಂಜ ವಹಿಸಿದ್ದರು. ಅತಿಥಿಗಳಾಗಿ ಜೈ ತುಲುನಾಡ್ (ರಿ) ಸಂಘಟನೆಯ ಅಧ್ಯಕ್ಷರಾದ ಸುದರ್ಶನ್ ಸುರತ್ಕಲ್, ಉಪಾಧ್ಯಕ್ಷರಾದ ಉದಯ್ ಪೂಂಜ, ಜನ ಜಾಗೃತಿ ವೇದಿಕೆ ಕಳಂಜದ ಮಾಜಿ ಅಧ್ಯಕ್ಷರಾದ ರುಕ್ಮಯ ಗೌಡ ಕಳಂಜ, ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ರಘುನಾಥ ರೈ ಹಾಗೂ ಜಗನ್ನಾಥ ರೈ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತುಳು ಲಿಪಿ ಪರೀಕ್ಷೆ ಬರೆದು ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಹಾಗೂ ಭಜನಾ ಶಿಬಿರದಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಭಜನಾ ಶಿಕ್ಷಕರಾದ ನಾರಾಯಣ ಕಳಂಜ ಹಾಗೂ ತುಳು ಲಿಪಿ ಶಿಕ್ಷಕರಾದ ಜಗದೀಶ ಗೌಡ ಕಲ್ಕಳ ಮತ್ತು ನಿಶ್ಚಿತ್ ರಾಮಕುಂಜ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಕಾರ್ಯಕ್ರಮದ ಅಧ್ಯಕ್ಷರು ಮಾತೃಭಾಷೆ ಹಾಗೂ ಭಜನೆಯ ಮಹತ್ವದ ಬಗ್ಗೆ ತಿಳಿಸಿದರು. ಜೈ ತುಲುನಾಡ್ (ರಿ) ಸಂಘಟನೆಯ ಅಧ್ಯಕ್ಷರು ಸುದರ್ಶನ್ ಸುರತ್ಕಲ್ ತುಳು ಲಿಪಿಯ ಪ್ರಾಚೀನತೆಯ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಲಕ್ಷ್ಮೀಶ ರೈ ಗುರಿಕ್ಕಾನ, ವಸಂತ ಪೂಜಾರಿ, ಲೋಹಿತ್ ಕಟ್ಟತ್ತಾರ್, ಶಿವಪ್ರಸಾದ್ ಕಳಂಜ ಉಪಸ್ಥಿತರಿದ್ದರು. ನಾರಾಯಣ ಕಳಂಜ ಸ್ವಾಗತಿಸಿ, ತುಳು ಲಿಪಿ ಸಮಿತಿ ಮೇಲ್ವಿಚಾರಕರಾದ ಕಿರಣ್ ತುಳುವೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.