Ad Widget

ಮೈಸೂರು ಮೂಲದ ವೃದ್ಧ ದಂಪತಿಗಳಿಗೆ ಊರಿಗೆ ತೆರಳಲು ಬಸ್ಸಿನ ದರವನ್ನು ನೀಡಿ ಸಹಕರಿಸಿದ ನ.ಪಂ ಸದಸ್ಯ ರಿಯಾಝ್ ಕಟ್ಟೆಕಾರ್

ಸುಬ್ರಮಣ್ಯಕ್ಕೆ ಕೆಲಸ ಅರಸಿಕೊಂಡು ಬಂದಿದ್ದ ವೃದ್ಧ ದಂಪತಿಗಳಿಗೆ ಮರಳಿ ಊರಿಗೆ ತೆರಳಲು ಕೈಯಲ್ಲಿ ಹಣವಿಲ್ಲದೆ ಸುಳ್ಯ ಬಸ್ ನಿಲ್ದಾಣದಲ್ಲಿ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳುತ್ತಿದ್ದ ಸಂದರ್ಭ ಸ್ಥಳೀಯರಿಂದ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ನಗರ ಪಂಚಾಯತಿ ಸದಸ್ಯ ರಿಯಾಜ್ ಕಟ್ಟೆಕಾರ್ ರವರು ವೃದ್ಧ ದಂಪತಿಗಳಿಗೆ ಊರಿಗೆ ತೆರಳಲು ಬಸ್ಸಿನ ದರವನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ. ಶೌಚಾಲಯದ ಸ್ವಚ್ಛತೆಯ ಕೆಲಸಕ್ಕೆ ಬಂದಿದ್ದ ಇವರು ಕೆಲಸ ಅರಸಿ ಬಂದಿದ್ದ ಸ್ಥಳದಲ್ಲಿ ಬೇರೆಯವರನ್ನು ನೇಮಿಸಿದ್ದ ಕಾರಣ ಇವರಿಗೆ ಕೆಲಸ ಸಿಕ್ಕಲು ಸಮಸ್ಯೆ ಉಂಟಾಗಿತ್ತು. ಆದರೆ ಮರಳಿ ಊರಿಗೆ ತೆರಳಲು ಹಣವಿಲ್ಲದೆ ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದ ಸಂದರ್ಭ ರಿಯಾಝ್ ಕಟ್ಟೆಕಾರ್ ರವರ ಸಹಾಯ ಹಸ್ತವು ವೃದ್ಧ ದಂಪತಿಗಳಿಗೆ ನೆರವಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading