ಕೊಡಗಿನ ಸುಂಟಿಕೊಪ್ಪ ಎಂಬಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ಥಳೀಯ ನಿವಾಸಿ ಎಂ.ಎಸ್. ರವಿ ಎಂಬುವವರು ಕನ್ನಡದ ಧ್ವಜ ಮತ್ತು ಕನ್ನಡದ ಪೇಟವನ್ನು ಧರಿಸಿ ಪೇಟೆಯಲ್ಲಿ ಸಂಚರಿಸಿ ಜನರಲ್ಲಿ ವಿಶೇಷ ಆಕರ್ಷಣೆಯನ್ನು ಮೂಡಿಸುತ್ತಿದ್ದಾರೆ. ಇವರು ಸತತ 25 ವರ್ಷಗಳಿಂದ ಕನ್ನಡದ ಕಂಪನ್ನು ಬೀರುತ್ತಿದ್ದಾರೆ. ಡಾಕ್ಟರ್ ರಾಜಕುಮಾರ್ ಅಭಿಮಾನಿ ಬಳಗದಲ್ಲಿ ಗುರುತಿಸಿಕೊಂಡು, ಪ್ರಸ್ತುತ ಸುಂಟಿಕೊಪ್ಪ ಡಾಕ್ಟರ್ ಅಂಬೇಡ್ಕರ್ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಪರಿಸರದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಇವರು ಕನ್ನಡದ ಅಪ್ಪಟ ಅಭಿಮಾನಿಯಾಗಿ ಮೂಡಿ ಬರುತ್ತಾರೆ. ಎಂ.ಎಸ್. ರವಿಯವರು ಕೂಲಿ ಕೆಲಸದವರಾಗಿ ಜೀವನ ಸಾಗಿಸುತ್ತಿದ್ದು ಪತ್ನಿ ಶೋಭಾ ಪುತ್ರರಾದ ಶರತ್, ಸಾಗರ್ ಪುತ್ರಿ ಸಂಗೀತ ರೊಂದಿಗೆ ಜೀವನ ಸಾಗಿಸುತ್ತಿದ್ದಾರೆ.
- Saturday
- November 23rd, 2024