ಶಿವ ಫ್ರೆಂಡ್ಸ್ (ರಿ) ಪಂಜ ಇದರ ಆಶ್ರಯದಲ್ಲಿ ಆಹ್ವಾನಿತ ಸ್ಥಳೀಯ ತಂಡಗಳ ವಾಲಿಬಾಲ್ ಪಂದ್ಯಾಟ ಮತ್ತು ಕರೋನ ವಾರಿಯರ್ಸ್ ಗೆ ಗೌರವಾರ್ಪಣೆ. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರೋಹಿತ್ ಪೆರ್ಮಾಜೆ ಅಧ್ಯಕ್ಷರು ಶಿವ ಫ್ರೆಂಡ್ಸ್ (ರಿ)ಪಂಜ, ಡಾ. ಮಂಜುನಾಥ್ ಭಟ್ ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜ,ಡಾ. ದೇವಿಪ್ರಸಾದ್ ಕಾನತ್ತೂರ್ ಆಡಳಿತಾಧಿಕಾರಿಗಳು ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಪಂಜ. ಮುಖ್ಯ ಅತಿಥಿಗಳಾಗಿ ಬಾಲಕೃಷ್ಣ ಗೌಡ ಕುದ್ವ ಹಿರಿಯ ಅಂತರಾಷ್ಟ್ರೀಯ ಕ್ರೀಡಾಪಟು, ಚನ್ನಪ್ಪಗೌಡ ಬಳ್ಳಕ್ಕ ನಿವೃತ್ತ ಯೋಧರು, ಮಾಧವ ಬಿ.ಕೆ ಅಧ್ಯಕ್ಷರು ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್, ಹಾಗೂ ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ಇದಾದ ಬಳಿಕ ಮಾತನಾಡಿದ ಡಾ. ದೇವಿಪ್ರಸಾದ್ ಕಾನತ್ತೂರ್ “ನಮ್ಮ ದೇಶದ ಯುವ ಮಿತ್ರರು ನಿಜವಾದ ದೇವರು” ಎಂಥ ಸಮಯದಲ್ಲೂ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಾರೆ ಎಂದು ಹೇಳಿದರು.
ಕೊರೋನ ವಾರಿಯರ್ಸ್ ಗೆ ಗೌರವಾರ್ಪಣೆ
ಕೊರೋನ ಎಂಬ ಹೆಮ್ಮಾರಿ ಇಡೀ ವಿಶ್ವವನ್ನೇ ನಡುಗಿಸಿದ್ದು ಸುಳ್ಳಲ್ಲ. ಕಣ್ಣಿಗೆ ಕಾಣದ ಈ ವೈರಸ್ ಅದೆಷ್ಟೋ ಅಮಾಯಕ ಜೀವಗಳ ಬಲಿಪಡೆದಿದ್ದು ನಿಜಕ್ಕೂ ವಿಷಾದನೀಯ.
ಇಂಥ ಸಂದರ್ಭದಲ್ಲೂ ಎದೆಗುಂದದೆ ಜನರಿಗಾಗಿ ಸೇವೆಸಲ್ಲಿಸಿದ ಎಲ್ಲಾ ಡಾಕ್ಟರ್ಸ್, ಪೊಲೀಸ್, ಪೌರಕಾರ್ಮಿಕರು ಇವರೆಲ್ಲರನ್ನೂ ನಾವು ಸ್ಮರಿಸಲೇಬೇಕು. ಈ ನಿಟ್ಟಿನಲ್ಲಿ ಪಂಜ ಪರಿಸರದ ಕೊರೋನ ವಾರಿಯರ್ಸ್ ಗಳಾದ ಡಾ|| ಮಂಜುನಾಥ ಭಟ್. ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜ. ಹಾಗೆ ಎ.ಎನ್. ಎಂ ಗಳಾದ ಶ್ರೀಮತಿ ಕಮಲ ಬಿಡಾರಕಟ್ಟೆ, ಶ್ರೀಮತಿ ಸತ್ಯವತಿ, ಶ್ರೀಮತಿ ರೇಣುಕಾ ಮತ್ತು ಆಶಾ ಕಾರ್ಯಕರ್ತರಾದ ದಮಯಂತಿ, ಚಂದ್ರವತಿ, ಗೌರಿ, ಸೆಲಿನಾ, ಪುಷ್ಪವತಿ, ಲಲಿತಾ, ರತ್ನಾವತಿ, ಲೀಲಾವತಿ ಇವರಿಗೆ ಡಾ|| ದೇವಿಪ್ರಸಾದ್ ಕಾನಾತ್ತೂರ್ ಅವರಿಂದ ಗೌರವಾರ್ಪಣೆ ಮಾಡಲಾಯಿತು.
ಗೌರವಾರ್ಪಣೆ ಯ ಬಳಿಕ ಮಾತನಾಡಿದ ಡಾ|| ಮಂಜುನಾಥ್ ಭಟ್ ನಾವೆಲ್ಲರೂ ಕೊರೋನವನ್ನೂ ದಿಟ್ಟವಾಗಿ ಎದುರಿಸೋಣ, ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಸ್ವಯಂರಕ್ಷಣೆ ಮಾಡಿಕೊಳ್ಳೋಣ . ಹಾಗೆ ಆಶಾ ಕಾರ್ಯಕರ್ತೆಯರು , ಎ.ಎನ್.ಎಂ ಗಳು ಕೇವಲ ಕೊರೋನ ಸಂದರ್ಭದಲ್ಲಿ ಮಾತ್ರವಲ್ಲದೆ ಅನೇಕ ಸಾಂಕ್ರಾಮಿಕ ರೋಗಗಳು ಬಂದ ಸಂದರ್ಭದಲ್ಲೂ ಮನೆಮನೆಗೆ ತೆರಳಿ ಜಾಗೃತಿ ಮೂಡಿಸಿದ್ದಾರೆ. ಎಂದು ಹೇಳಿದರು.
ಕ್ರೀಡಾಕೂಟಕ್ಕೆ ಚಾಲನೆ:
ವಾಲಿಬಾಲ್ ಕ್ರೀಡಾಕೂಟದ ಸುಸಂದರ್ಭದಲ್ಲಿ ಮಾಧವ ಬಿ.ಕೆ ಅಧ್ಯಕ್ಷರು ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್ ಮತ್ತು ಚನ್ನಪ್ಪಗೌಡ ಬಳ್ಳಕ್ಕ ನಿವೃತ್ತ ಯೋಧರು ಇವರುಗಳು ಚಾಲನೆಯನ್ನು ನೀಡಿದರು.