Ad Widget

ಸಮಹಾದಿ : ಅಕ್ರಮ ಮರ ಸಾಗಾಟಕ್ಕೆ ತಡೆ- ಟಿಪ್ಪರ್ ವಶ, ಆರೋಪಿಗಳು ಪರಾರಿ

ಪಂಜ ಅರಣ್ಯಾಧಿಕಾರಿಗಳ ಮಿಂಚಿನ ಕಾರ್ಯಾಚರಣೆಯಿಂದಾಗಿ ಅಕ್ರಮ ಮರ ಸಾಗಾಟ ಮಾಡುತ್ತಿದ್ದಾಗ ತಡೆದು ವಾಹನ ವಶಪಡಿಸಿಕೊಂಡ ಘಟನೆ ನಡೆದಿದೆ. ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಸಮಹಾದಿ ಎಂಬಲ್ಲಿ ಅಕ್ರಮವಾಗಿ ಕಿರಾಲ್‍ಬೋಗಿ ಮತ್ತು ಹಲಸು ಜಾತಿಯ ಮರದ ದಿಮ್ಮಿಗಳನ್ನು ಈಚರ್ ಟಿಪ್ಪರ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪಂಜ ವಲಯದ ಎಡಮಂಗಲ ಶಾಲೆಯ ಸಿಬ್ಬಂದಿಗಳು ಹಾಗೂ ರಾತ್ರಿ ಗಸ್ತು ಕರ್ತವ್ಯ ಸಿಬ್ಬಂದಿಗಳು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಟಿಪ್ಪರ್ ಪರವಾನಿಗೆ ಅಮಾನತು ಪಡಿಸಲಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ವಾಹನ ಹಾಗೂ ಸೊತ್ತುಗಳ ಮೌಲ್ಯ ಅಂದಾಜು 3 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಡಮಂಗಲ ಶಾಖಾ ಉಪವಲಯ ಅರಣ್ಯಾಧೀಕಾರಿ ಯಶೋಧರ್ ಕೆ., ಅರಣ್ಯ ರಕ್ಷಕರಾದ ಸಂತೋಷ್ ಎಸ್, ಧಮ್ಮಸೂರ, ಭರಮಪ್ಪ ಹೆಚ್ ಬೆಳಗಲ್, ರವಿಕುಮಾರ್, ವಾಹನ ಚಾಲಕ ಪದ್ಮ ಕುಮಾರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!