ಪೆರುವಾಜೆ ಗ್ರಾಮದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಗುದ್ದಲಿ ಪೂಜಾ ಕಾರ್ಯಕ್ರಮವು ಶಾಸಕರ ನೇತೃತ್ವದಲ್ಲಿ ನ.01 ರಂದು ಪೆರುವಾಜೆ ಗ್ರಾಮದಲ್ಲಿ ನಡೆಯಿತು.
ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ಸುಮಾರು 27.50 ಲಕ್ಷ ದ ಯಾತ್ರಿ ನಿವಾಸದ ಗುದ್ದಲಿ ಪೂಜೆ ಕಾರ್ಯಕ್ರಮವು ಈ ಸಂದರ್ಭದಲ್ಲಿ ನಡೆಯಿತು. ಪೆರುವಾಜೆ ಗ್ರಾಮದ ಮುಕ್ಕೂರು, ಮುರ್ಕೆತ್ತಿ, ಪೆರುವಾಜೆ ಬೂತ್ ನಲ್ಲಿ ಸುಮಾರು 7,31,38, 000 (ಏಳು ಕೋಟಿಯ ಮೂವತ್ತೊಂದು ಲಕ್ಷದ ಮೂವತ್ತೆಂಟು ಸಾವಿರ )ದ ವಿವಿಧ ಕಾಮಗಾರಿಗಳ ಉದ್ಘಾಟನೆ, ಗುದ್ದಲಿ ಪೂಜೆ, ಕಾಮಗಾರಿ ವೀಕ್ಷಣೆ ನಡೆಯಿತು. ಈ ಸಂದರ್ಭದಲ್ಲಿ ಪೆರುವಾಜೆ ಗ್ರಾಮದ ಕಾರ್ಯಕರ್ತರು ಶಾಸಕರನ್ನು ಅಭಿನಂದಿಸಿದರು.
ಗ್ರಾಮದ ನೂರಾರು ಕಾರ್ಯಕರ್ತರು ಶಾಸಕರನ್ನು ಹಾಗೂ ಮಂಡಲ ಬಿ.ಜೆ.ಪಿ. ಪ್ರಮುಖರನ್ನು ಬೈಕ್ ರ್ಯಾಲಿ ಮಾಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ ಬಾಕಿ ಉಳಿದ ಕಾಮಗಾರಿಗಳಿಗೆ ಹಾಗೂ ಗ್ರಾಮದ ಅಭಿವೃದ್ಧಿಗೆ ಕಠಿಬದ್ಧನಾಗಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಡಲ ಬಿ ಜೆ ಪಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ತಾಲೂಕು ಸಂಯೋಜಕರಾದ ರಾಧಾಕೃಷ್ಣ ಬೊಳ್ಳೂರು, ಯುವ ಉದ್ಯಮಿ ಹಾಗೂ ಮುಖಂಡರಾದ ಲಕ್ಷ್ಮೀನಾರಾಯಣ ಐವರ್ನಾಡು, ಸುಳ್ಯ ಎಪಿಎಂಸಿ ಉಪಾಧ್ಯಕ್ಷರಾದ ನವೀನ್ ಸಾರಕೆರೆ, ಪ್ರಮುಖರಾದ ಪದ್ಮನಾಭ ಶೆಟ್ಟಿ ಪೆರುವಾಜೆ, ಜಯಪ್ರಕಾಶ್ ರೈ ಪೆರುವಾಜೆ, ಎಸ್ ಟಿ ಮೋರ್ಚಾದ ತಾಲೂಕು ಕಾರ್ಯದರ್ಶಿ ರಮೇಶ್ ಮಠತ್ತಡ್ಕ, ಹಾಗೂ ಬೂತ್ ಕಾರ್ಯದರ್ಶಿ ಹರ್ಷಿತ್ ಪೆರುವಾಜೆ, ಚಿದಾನಂದ ಬಜ, ನಾಗೇಶ್ ಕೊಲ್ಯ, ದೀಪಕ್ ಶೆಟ್ಟಿ ಪೆರುವಾಜೆ, ತಾಲೂಕು ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ನವೀನ್ ಬೊಟ್ಟತ್ತಾರು, ಗಂಗಾಧರ್ ಬೊಟ್ಟತ್ತಾರು, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಉಮೇಶ್ ಕೆ.ಎಂ.ಬಿ, ನಾರಾಯಣ ಕೊಂಡೆಪ್ಪಾಡಿ, ಕಿರಣ್,ದಿವಾಕರ್, ರೂಪಾನಂದ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ನವೀನ್ ನೆಟ್ಟಾರು , ಶೈಲೇಶ್ ನೆಟ್ಟಾರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.