Ad Widget

ಸುಳ್ಯ : ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ

ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ವತಿಯಿಂದ 65ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ ಇಂದು ಸುಳ್ಯ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣದ ಟ್ರಸ್ಟ್ ಕಚೇರಿ ಆವರಣದಲ್ಲಿ ನಡೆಯಿತು. ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಎನ್ ಜಯಪ್ರಕಾಶ್ ರೈ ಯವರು ಧ್ವಜಾರೋಹಣ ನೆರವೇರಿಸಿದರು.

. . . . . . . . .

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕನ್ನಡ ನಾಡು ನುಡಿ ಭಾಷೆ ಇದರ ಬಗ್ಗೆ ಜನಗಳಲ್ಲಿ ಜಾಗೃತಿ ಅಗತ್ಯ. ಭಾಷೆಯ ಬಗ್ಗೆ ದುರಭಿಮಾನ ಸಲ್ಲದು, ಅಭಿಮಾನ ಬೇಕಾಗಿದೆ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆಯುವುದರ ಮೂಲಕ ಕನ್ನಡ ಭಾಷೆಯನ್ನು ಉಳಿಸುವಲ್ಲಿ ಹಾಗೂ ಪ್ರತಿಯೊಬ್ಬರು ಸಹಕರಿಸಬೇಕಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕ.ಸಾ.ಪ. ಸುಳ್ಯ ಇದರ ಸದಸ್ಯರು, ಹಿರಿಯ ಪತ್ರಕರ್ತರು ಆದ ಶ್ರೀ ಗಂಗಾಧರ ಮಟ್ಟಿ ಅವರು ಮಾತನಾಡಿ ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ಒಂದು ದಿನದ ಕಾರ್ಯಕ್ರಮ ವಾಗಿರದೆ ಕನ್ನಡ ಭಾಷೆ ಹಾಗೂ ಸಂಸ್ಕೃತಿ ಉಳಿಸಲು ಪ್ರತಿದಿನ ಕನ್ನಡಿಗರಾದ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ಕನ್ನಡ ಮಾಧ್ಯಮ ಶಾಲೆಗಳು ಮುಚ್ಚದಂತೆ ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಅಗತ್ಯ ಎಂದು ಹೇಳಿದರು. ಕು. ಹರ್ಷಿತಾ, ಕು. ಜೀವಿತಾ ತಂಡದವರಿಂದ ನಾಡಗೀತೆ ಹಾಡಿದರು.ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯಧ್ಯಕ್ಷರು ಆದ ಸಂಶುದ್ದೀನ್ ಎಸ್ ಹಾಗೂ ನಗರ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಭಟ್, ಡೇವಿಡ್ ಧೀರಾ ಕ್ರಾಸ್ತಾ, ಮಾಜಿ ನಗರ ಪಂಚಾಯತ್ ಸದಸ್ಯರಾದ ಕೆಎಂ ಮುಸ್ತಫ, ಉದ್ಯಮಿಗಳಾದ ಗೋಪಾಲಕೃಷ್ಣ ಕರೋಡಿ, ಶಾಫಿ ಕುತ್ತಮೊಟ್ಟೆ, ಟ್ರಸ್ಟ್ ನ ಉಪಾಧ್ಯಕ್ಷರಾದ ಶಶಿಧರ ಎಂ ಜೆ, ನಂದರಾಜ್ ಸಂಕೇಶ್, ಸುಧೀರ್ ರೈ ಮೇನಾಲ, ರಾಧಾಕೃಷ್ಣ ಪರಿವಾರಕಾನ, ಅಬ್ದುಲ್ ರಜಾಕ್, ಭವಾನಿ ಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ಧೆ, ಜಯರಾಮ ಶೆಟ್ಟಿ ಕೆ ಎನ್, ಹರಿಶ್ಚಂದ್ರ ಪಂಡಿತ್, ಮಧುಸೂಧನ ಬೂಡು, ಪ್ರವೀಣ್ ಕುಮಾರ್, ಸುದೀಪ್ ರೈ ಮೇನಾಲ, ಬುದ್ಧ ಸಂಕೇಶ ಉಪಸ್ಥಿತರಿದ್ದರು. ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯದರ್ಶಿ ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಕಾರ್ಯಕ್ರಮ ನಿರ್ವಹಿಸಿದರು. ಟ್ರಸ್ಟ್ ನ ಖಜಾಂಜಿ ಗೋಕುಲ್ ದಾಸ್ ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading