- Sunday
- April 20th, 2025

ಸುಬ್ರಹ್ಮಣ್ಯದ ಉದ್ಯಮಿ ಆರ್ಯಭಟ, ಜೇಸೀ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರವಿ ಕಕ್ಕೆಪದವುರವರ ಮನೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ರಲ್ಲಿ 625 ಅಂಕಗಳನ್ನು ಪಡೆದ ಅನುಷ್ ಹಾಗೂ ಕುಮಾರಸ್ವಾಮಿ ವಿದ್ಯಾಲಯದ ಮುಖ್ಯ ಶಿಕ್ಷಕಿ ವಿದ್ಯಾರತ್ನ ಸೇರಿದಂತೆ ಎಲ್ಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು. ಜೇಸೀ ವಲಯಾಧ್ಯಕ್ಷರ ಅಧಿಕೃತ ಭೇಟಿ ಸಂದರ್ಭದಲ್ಲಿ ಸುಬ್ರಹ್ಮಣ್ಯ ಜೇಸೀ ಮೂಲಕ ಆಯೋಜನೆಗೊಂಡ ಈ ಕಾರ್ಯಕ್ರಮದಲ್ಲಿ ಜೇಸಿ ವಲಯಾಧ್ಯಕ್ಷ...

ಕಲ್ಲುಗುಂಡಿ ಹೊರಠಾಣೆಯ ಸಿಬ್ಬಂದಿ ಸುನಿಲ್ ತಿವಾರಿ ಕೊರೊನಾ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇವರ ಸೇವೆಯನ್ನು ಗುರುತಿಸಿ ಸುಳ್ಯ ತಾಲೂಕು ನಾಡಹಬ್ಬಗಳ ಸಮಿತಿ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶಾಸಕ ಎಸ್.ಅಂಗಾರ ಕೊರೊನಾ ವಾರಿಯರ್ ಸುನಿಲ್ ತಿವಾರಿಯನ್ನು ಸನ್ಮಾನಿಸಿದರು.

ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಾಣಿಯೂರು ಪ್ರಗತಿ ಶಾಲಾ ವಿಧ್ಯಾರ್ಥಿನಿ ಪುಣ್ಯ ಎಂ.ಪಿ. 543 ಅಂಕ (88%) ಪಡೆದಿರುತ್ತಾಳೆ. ಈಕೆ ಬೆಳ್ಳಾರೆಯ ಪ್ರೇಮ್ ಸ್ಟುಡಿಯೋ ಮಾಲಕ ಪ್ರೇಮಚಂದ್ರ ಮತ್ತು ಗೀತಾ ದಂಪತಿಗಳ ಪುತ್ರಿ.

ಕೊರೊನಾ ಕಾರಣದಿಂದಾಗಿ ಈ ಬಾರಿಯ ಗಣೇಶೋತ್ಸವ ಆಚರಣೆ ಮಾಡಲು ನಿರ್ಬಂಧ ಹೊರಡಿಸಲಾಗಿತ್ತು. ಮತ್ತೆ ಈಗ ಮಾರ್ಗಸೂಚಿಯಲ್ಲಿ ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿ ಸಂಘ- ಸಂಸ್ಥೆಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ. ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಜನರ...

ಕೊಲ್ಲಮೊಗ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ನಡೆದ ರಾಂಡಮ್ ಟೆಸ್ಟ್ ವೇಳೆ ಹರಿಹರ ಪಲ್ಲತ್ತಡ್ಕದ ವ್ಯಕ್ತಿಯೊಬ್ಬರಿಗೆ ಪಾಸಿಟಿವ್ ಧೃಡಪಟ್ಟಿದೆ.ನಿನ್ನೆ ಹಾಲೆಮಜಲಿನ ಮಹಿಳೆಯೊಬ್ಬರು ಚಿಕಿತ್ಸೆ ಗಾಗಿ ಮಂಗಳೂರಿಗೆ ಹೋಗಿದ್ದ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ. ಹಾಗೂ ಅರಂತೋಡಿನ ಅಂಚೆ ವಿತರಕರಿಗೆ ಕೂಡ ಪಾಸಿಟಿವ್ ಧೃಡಪಟ್ಟಿದೆ. ಜನತೆ ಭಯಪಡುವ ಭಯಪಡುವ ಅಗತ್ಯವಿಲ್ಲ, ಸಾಮಾಜಿಕ ಅಂತರ, ಮಾಸ್ಕ್...

ಬೆಳ್ತಂಗಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಹಿತೇಶ್ ಕುಂಚಡ್ಕ ಈ ಬಾರಿಯ ಎಸ್ . ಎಸ್.ಎಲ್.ಸಿ.ಪರೀಕ್ಷೆಯಲ್ಲಿ ( 611 ) ಶೇ .97.76 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುತ್ತಾರೆ . ಈತ ಆಲೆಟ್ಟಿ ಗ್ರಾಮದ ಕುಂಚಡ್ಕ ಲೋಲಜಾಕ್ಷ ಕೆ.ಸಿ.ಮತ್ತು ಶ್ರೀಮತಿ ಪದ್ಮಾವತಿ ಕೆ ದಂಪತಿಗಳ ಪುತ್ರ .

ಬೆಳ್ಳಾರೆ : ಪಾಸಿಟಿವ್ ಆಗಿದ್ದ ಮೊಟುಕಾನದ ಪತ್ರಕರ್ತರ ಪ್ರಾಥಮಿಕ ಸಂಪರ್ಕಿತರಾಗಿ ಕಾರಂಟೈನ್ ನಲ್ಲಿದ್ದ ಮನೆಯ ಎಲ್ಲರ ಪರೀಕ್ಷೆ ಇಂದು ನಡೆದಿದ್ದು ವರದಿ ನೆಗೆಟಿವ್ ಬಂದಿದೆ ಎಂದು ತಿಳಿದುಬಂದಿದೆ.

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಸದಸ್ಯರಾಗಿ ಪುತ್ತೂರು ಎ ಪಿ ಎಂ ಸಿ ಅಧ್ಯಕ್ಷರಾದ ಸವಣೂರಿನ ದಿನೇಶ್ ಮೆದು ಆಯ್ಕೆಯಾಗಿದ್ದಾರೆ.

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(18.08.2020 ಮಂಗಳವಾರ) ಅಡಿಕೆ ಧಾರಣೆಹೊಸ ಅಡಿಕೆ 300 - 360ಹಳೆ ಅಡಿಕೆ 300 - 390ಡಬಲ್ ಚೋಲ್ 300 - 390 ಫಠೋರ 220 - 290ಉಳ್ಳಿಗಡ್ಡೆ 110 - 200ಕರಿಗೋಟು 110 - 185 ಕಾಳುಮೆಣಸುಕಾಳುಮೆಣಸು 250 - 320 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಸುಳ್ಯ ತಾಲೂಕಿನ ಹಲವೆಡೇ ರಸ್ತೆ ಅಭಿವೃದ್ಧಿ ಕಂಡರೂ ಈ ಗುತ್ತಿಗಾರು ಬಳ್ಪ ರಸ್ತೆ ಮಾತ್ರ ಹದಗೆಟ್ಟು ಪ್ರಯಾಣಿಕರು ನರಳಾಡುವಂತೆ ಆಗಿದೆ. ಈ ರಸ್ತೆಯಲ್ಲೊಮ್ಮೆ ಪ್ರಯಾಣಿಸಿದ ಪ್ರತಿಯೊಬ್ಬನೂ ಶಾಪ ಹಾಕದೇ ಹೋದವರು ಇರಲಿಕ್ಕಿಲ್ಲ ಅಲ್ಲವೇ.? ಬಳ್ಪ ಕಮಿಲ ರಸ್ತೆಗೆ ಕೆಲವೆಡೆ ಅಭಿವೃದ್ಧಿ ಆದರೇ ಹಲವೆಡೆ ಸಂಪೂರ್ಣ ಹದಗೆಟ್ಟಿದ್ದು ದಶಕಗಳ ಹಿಂದೆ ಹಾಕಿದ ಡಾಮರ್ ಮಾಯವಾಗಿದೆ. ಇದರಿಂದ ಮಣ್ಣಿನ...

All posts loaded
No more posts