

ಸುಳ್ಯದ ಗಾಂಧಿನಗರದ ಶಶಿ ಕಾಂಪ್ಲೆಕ್ಸ್ ನಲ್ಲಿ ಪುರುಷರ ಡ್ರೆಸ್ ಮಳಿಗೆ “ಅಯೋಧ್ಯಾ” ಇಂದು ಶುಭಾರಂಭಗೊಂಡಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೆ.ವಿ.ಜಿ.ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ್ ಕೆ.ವಿ., ಗಣೇಶ್ ಪ್ರಿಂಟರ್ಸ್ ಮಾಲಕ ಪಿ.ಕೆ.ಉಮೇಶ್, ಗೌಡ ಯುವಸೇವಾ ಸಂಘದ ತರುಣ ಘಟಕದ ಅಧ್ಯಕ್ಷ ರಜತ್ ಅಡ್ಕಾರ್, ಕಾಂಪ್ಲೆಕ್ಸ್ ಮಾಲಕ ಶಶಿಧರ ಆಚಾರ್ಯ, ಭಜರಂಗದಳ ಜಿಲ್ಲಾ ಸಹ ಸಂಯೋಜಕ ಲತೀಶ್ ಗುಂಡ್ಯ, ಉಬರಡ್ಕ ಮಿತ್ತೂರು ಗ್ರಾ. ಪಂ. ಮಾಜಿ ಅಧ್ಯಕ್ಷ ಹರೀಶ್ ರೈ ಉಬರಡ್ಕ, ಜಿಲ್ಲಾ ಬಿ.ಜೆ.ಪಿ.ಯುವ ಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್, ಕಾವೇರಿ ಡ್ರೈವಿಂಗ್ ಸ್ಕೂಲ್ ನ ಸಂತೋಷ್ ಮಡ್ತಿಲ, ಯುವಜನ ಸಂಯುಕ್ತ ಮಂಡಳಿ ಉಪಾಧ್ಯಕ್ಷ ಪ್ರವೀಣ್ ಜಯನಗರ, ಕಾಯರ್ತೋಡಿ ಯುವಕ ಮಂಡಲದ ಅಧ್ಯಕ್ಷ ಮಹೇಶ್ ಕುದ್ಪಾಜೆ, ಶರತ್ ಪರಿವಾರಕಾನ ಮತ್ತಿತರರು ಉಪಸ್ಥಿತರಿದ್ದರು. ಮಾಲಕರಾದ ಅಕ್ಷಯ ರಜಪೂತ್ ಕಲ್ಲಡ್ಕ ಮತ್ತು ಗಣೇಶ್ ಪಾಟಾಳಿ ಸ್ವಾಗತಿಸಿ, ವಂದಿಸಿದರು.