ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಪೊಳೆಂಜ ಪುಷ್ಪಾವತಿ ಅವರ ಮಗ ನವೀನ್ ಗೆ ಮೆದುಳಿನ ಸಮಸ್ಯೆ ಬಾಧಿಸಿ ಶೀಘ್ರವಾಗಿ ಚಿಕಿತ್ಸೆ ಒದಗಿಸುವ ಅಗತ್ಯವಿತ್ತು. ಬಡತನದಲ್ಲಿದ್ದ ಇವರಿಗೆ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟವಾಗಿ ಸಹೃದಯಿ ದಾನಿಗಳು ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಅಮರ ಸುದ್ದಿ ವೆಬ್ಸೈಟ್ ನಲ್ಲಿ ನವೀನ್ ನ ಚಿಕಿತ್ಸೆಗೆ ನೆರವಾಗುವಿರಾ? ಎಂದು ವರದಿ ಪ್ರಕಟಿಸಿತ್ತು. ಅಲ್ಲದೇ ಹಲವಾರು ಸಂಘಸಂಸ್ಥೆಗಳು ಜಾಲತಾಣಗಳಲ್ಲಿ ಚಿಕಿತ್ಸೆಗೆ “ಸಹಾಯ ಹಸ್ತ ” ನೀಡಬೇಕೆಂದು ಮನವಿ ಮಾಡಲಾಗಿತ್ತು. ಕೇವಲ ಹತ್ತು ದಿನದಲ್ಲಿ ಚಿಕಿತ್ಸೆಗೆ ಬೇಕಾದ ಹಣ ಆ ತಾಯಿಯ ಖಾತೆಗೆ ಮತ್ತು ನಗದು ರೂಪದಲ್ಲಿ ಹರಿದು ಬಂದಿತ್ತು. ಸಹೃದಯಿ ದಾನಿಗಳಿಂದ ಸುಮಾರು ರೂ 2,80,951/- ಹಣ ಹರಿದು ಬಂದು ನವೀನ್ ಚಿಕಿತ್ಸೆ ಯಶಸ್ವಿಯಾಗಿ ನಡೆಯಿತು. ಇದರಲ್ಲಿ ಅದೆಷ್ಟೋ ಕಾಣದ ವ್ಯಕ್ತಿಗಳು ಸಹಾಯವನ್ನು ಮಾಡಿರುತ್ತಾರೆ . ಇವರೆಲ್ಲರ ಸಹಕಾರದಿಂದ ನವೀನ್ ನ ಆರೋಗ್ಯ ಚೇತರಿಕೆಗೊಂಡು ಮನೆಗೆ ಬಂದಿರುತ್ತಾನೆ. ತನ್ನ ಮಗುವಿನ ಜೀವ ಉಳಿಸಿಕೊಳ್ಳಲು ಇಂತಹ ಸಮಯದಲ್ಲಿ ಸಹಕರಿಸಿದ ಎಲ್ಲಾ ಸಂಘ ಸಂಸ್ಥೆಗಳು ಮತ್ತು ದಾನಿಗಳು,ಸಂಘಟಕರು, ಶ್ರೀ ದುರ್ಗಾ ಕ್ರಿಕೆಟರ್ ಅಲೆಕ್ಕಾಡಿ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ನವೀನ್ ನ ತಾಯಿ ಈ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
- Thursday
- November 21st, 2024