
ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು , ಜಾಲ್ಸೂರು ವಲಯ ಮೈತಡ್ಕ ಶಾಖೆ ,ಇದರ ಪುನರ್ರಚನೆಯು ಇಂದು ನಡೆಯಿತು. ಈ ನೂತನ ಶಾಖೆಯ ಗೌರವಾಧ್ಯಕ್ಷರಾಗಿ ಸುಂದರ ಕಾಡುಸೊರಂಜ, ಅಧ್ಯಕ್ಷರಾಗಿ ನವೀನ್ ಕುಮಾರ್ ಯಾವಟೆ, ಉಪಾಧ್ಯಕ್ಷರಾಗಿ ಪ್ರಕಾಶ್, ಪ್ರಧಾನ ಕಾರ್ಯದರ್ಶಿಯಾಗಿ ಆದರ್ಶ್, ಕಾರ್ಯದರ್ಶಿಗಳಾಗಿ ಅಶ್ವಥ್ ಯಾವಟೆ, ಮಿಥೇಶ್, ಸಂಪರ್ಕ ಪ್ರಮುಖರಾಗಿ ರತೀಶ್ ಪರಪ್ಪು, ಪ್ರಚಾರ ಪ್ರಮುಖರಾಗಿ ದಿವಾಕರ್ ಸಿರಾಜೆ, ಹಿಂದುಯುವವಾಹಿನಿ ಪ್ರಮುಖರಾಗಿ ತ್ರೀಜಿತ್ ಯಾವಟೆ, ಮಾತೃಸುರಕ್ಷಾ ಪ್ರಮುಖರಾಗಿ ವಿಷ್ಣುಪ್ರಸಾದ್ ಮೀನಗದ್ದೆ, ಹಾಗೂ ವಿಜಿತ್ ಕಾಡುಸೊರಂಜ ಆಯ್ಕೆಯಾದರು. ಈ ಶಾಖೆಯ ಪುನರ್ರಚನೆ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಮುಖ್ ಜಯಂತ್ ಮಡಪ್ಪಾಡಿ, ಹಿಂದೂ ಜಾಗರಣ ವೇದಿಕೆಯ ಪುತ್ತೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ, ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ಇದರ ಅಧ್ಯಕ್ಷರಾದ ಮಹೇಶ್ ಉಗ್ರಾಣಿಮನೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯಕ್ ಕೊಡಿಯಾಲ, ಪ್ರಚಾರ ಪ್ರಮುಖ್ ಚಂದು ಕೊಡಿಯಾಲ, ಸಂಪರ್ಕ ಪ್ರಮುಖ್ ದೀಕ್ಷಿತ್ ಕುಕ್ಕೆಟ್ಟಿ, ಹಾಗೂ ಗಣೇಶ್ ಬೊಳುಗಲ್ಲು, ರಾಕೇಶ್ ಕಣೆಮರಡ್ಕ, ಮನೋಜ್ ಕಣೆಮರಡ್ಕ, ಸುದರ್ಶನ್ ಮುರೂರು, ಚಂದ್ರಜೀತ್ ಮುರೂರು.ವಿಪಿನ್ ನಂಬಿಯಾರ್, ಉಪಸ್ಥಿತರಿದ್ದರು. ನವೀನ್ ಕುಮಾರ್ ಯಾವಟೆ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಹಾಗೂ ಜಯಂತ್ ಮಡಪ್ಪಾಡಿ ಶುಭಹಾರೈಸಿದರು.