
ವಿಶ್ವ ಹಿಂದೂ ಪರಿಷದ್ ಭಜರಂಗದಳ ಇದರ ನೂತನ ‘ಶ್ರೀ ಮಹಾವಿಷ್ಣು ಶಾಖೆ’ಯ ಉದ್ಘಾಟನಾ ಕಾರ್ಯಕ್ರಮ ಇಂದು (ಆಗಸ್ಟ್ 30) ಕಳಂಜದ ವಿದ್ಯಾನಿಕೇತನ ಶಿಶುಮಂದಿರದಲ್ಲಿ ಜರುಗಿತು. ಸುಳ್ಯ ಪ್ರಖಂಡದ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷರಾದ ಸೋಮಶೇಖರ ಪೈಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವಿಹಿಂಪ ಜಿಲ್ಲಾ ಸಹಸಂಯೋಜಕ ಲತೀಶ್ ಗುಂಡ್ಯ ಪ್ರಸ್ತಾವನೆಗೈದರು. ಈ ಸಂದರ್ಭದಲ್ಲಿ ವಿಹಿಂಪ ಸಹಕಾರ್ಯದರ್ಶಿ ಭಾನುಪ್ರಕಾಶ್ ದೊಡ್ಡತೋಟ, ಸುಳ್ಯ ಪ್ರಖಂಡದ ಭಜರಂಗದಳ ಸುರಕ್ಷಾ ಪ್ರಮುಖ್ ಸನತ್ ಪದವು ಚೊಕ್ಕಾಡಿ, ಕಳಂಜ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಲಕ್ಷ್ಮೀಶ ರೈ ಗುರಿಕ್ಕಾನ ಉಪಸ್ಥಿತರಿದ್ದರು. ಜಗದೀಶ್ ಮುಂಡುಗಾರು ಸ್ವಾಗತಿಸಿ, ವಂದಿಸಿದರು.
ವಿಶ್ವ ಹಿಂದೂ ಪರಿಷದ್ ಭಜರಂಗದಳ ಶ್ರೀ ಮಹಾವಿಷ್ಣು ಶಾಖೆಯ ಅಧ್ಯಕ್ಷರಾಗಿ ಲಕ್ಷ್ಮೀಶ ರೈ ಗುರಿಕ್ಕಾನ, ಉಪಾಧ್ಯಕ್ಷರಾಗಿ ಸತೀಶ್ ಕಳಂಜ, ಕಾರ್ಯದರ್ಶಿಯಾಗಿ ನಾರಾಯಣ ಕಳಂಜ, ಸತ್ಸಂಗ ಪ್ರಮುಖ್ ರಘುನಾಥ ರೈ ಅಂಕತ್ತಡ್ಕ, ಭಜರಂಗದಳ ಸಂಯೋಜಕರಾಗಿ ಶಿವಪ್ರಸಾದ್ ಕಳಂಜ, ಸಹಸಂಯೋಜಕರಾಗಿ ದಿಲೀಪ್ ಕಳಂಜ ಮತ್ತು ಗಣೇಶ್ ಕಳಂಜ, ಗೋರಕ್ಷಾ ಪ್ರಮುಖ್ ಆಗಿ ಸುಧೀರ್ ಕಳಂಜ ಮತ್ತು ನವೀನ್ ಕಳಂಜ, ಸುರಕ್ಷಾ ಪ್ರಮುಖ್ ಆಗಿ ವಿಶ್ವನಾಥ ಕುಕ್ಕುದಡಿ ಕಳಂಜ ಮತ್ತು ಭಾಸ್ಕರ ಪಟ್ಟೆ, ಸಾಪ್ತಾಹಿಕ ಮಿಲನ್ ಆಗಿ ಮಹೇಶ್ ಕಳಂಜ, ಅಖಾಡ ಪ್ರಮುಖ್ ಆಗಿ ದೀಕ್ಷಿತ್ ಕಳಂಜ ಮತ್ತು ಚಿರಂಜೀವಿ ಮಣಿಮಜಲು, ವಿದ್ಯಾರ್ಥಿ ಪ್ರಮುಖ್ ಆಗಿ ರಹಲ್ ರೈ ಕಳಂಜ ಮತ್ತು ಧನುಷ್ ಆಯ್ಕೆಯಾದರು.