ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿಯ ಮಹಾಸಭೆ ಇಂದು ಕೆವಿಜಿ ಕಾನೂನು ಕಾಲೇಜು ಸಭಾಂಗಣದಲ್ಲಿ ಇಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿಯ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ವಹಿಸಿದ್ದರು. ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣರಾದ ಪಿ.ಸಿ.ಜಯರಾಮರು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಚಂದ್ರಾಕ್ಷಿ ಜೆ. ರೈ, ಕೋಶಾಧಿಕಾರಿಯಾಗಿ ದಿನೇಶ್ ಮಡ್ತಿಲ, ಉಪಾಧ್ಯಕ್ಷರುಗಳಾಗಿ ಶ್ರೀಮತಿ ಕಮಲಾಕ್ಷಿ ವಿ.ಶೆಟ್ಟಿ , ಎಸ್.ಸಂಶುದ್ದೀನ್, ಡಾ.ಲೀಲಾಧರ್ ಡಿ.ವಿ., ಬಿ.ಕೆ.ಮಾಧವ, ಡಾ.ಹರಪ್ರಸಾದ್ ತುದಿಯಡ್ಕ, ಜತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಹಿಮಾನ್ ಮೊಗರ್ಪಣೆ, ಭವಾನಿಶಂಕರ್ ಅಡ್ತಲೆ, ದೀಪಕ್ ಕುತ್ತಮೊಟ್ಟೆ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಿವರಾಮ ಯೇನೆಕಲ್, ದೊಡ್ಡಣ್ಣ ಬರೆಮೇಲು , ಚಂದ್ರಶೇಖರ ಪೇರಾಲು , ಡಾ.ಪುರುಷೋತ್ತಮ ಕೆ.ಜಿ., ಶ್ರೀಮತಿ ಉಷಾ ಎಸ್. ಶೇಖ, ಡಾ.ಎನ್.ಎ.ಜ್ಞಾನೇಶ್, ದಿನೇಶ್ ಅಂಬೆಕಲ್ಲು ಮತ್ತು ಹರೀಶ್ ಬಂಟ್ವಾಳ್ ಆಯ್ಕೆಯಾದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಗ್ರಾಮೀಣ ಪ್ರತಿಭೆ, ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ ಅನುಷ್ ಎ.ಎಲ್. ಹಾಗೂ ಸರಕಾರಿ ಶಾಲೆಗಳ ಪೈಕಿ ಅತೀ ಹೆಚ್ಚಿನ 605 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ಗ್ರಾಮೀಣ ಪ್ರತಿಭೆ ಎಲಿಮಲೆ ಪ್ರೌಢ ಶಾಲೆಯ ವಿದ್ಯಾರ್ಥಿನಿ ಹಿತಾಶ್ರೀ ಪಿ ಇವರುಗಳನ್ನು ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.