
ಮುರುಳ್ಯ ಹಾಲು ಉತ್ಪಾದಕರ ಸಹಕಾರ ಸಂಘ. ನಿ. ಅಲೆಕ್ಕಾಡಿ ಇದರ ನೂತನ ಅಧ್ಯಕ್ಷರ ಆಯ್ಕೆಯು ಆ.26 ರಂದು ಸಂಘದ ಕಛೇರಿಯಲ್ಲಿ ನಡೆಯಿತು. ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ತಾಲೂಕು ಅಭಿವೃದ್ಧಿ ಅಧಿಕಾರಿ ಕೆ. ಶಿವಲಿಂಗಯ್ಯನವರು ಕಾರ್ಯನಿರ್ವಹಿಸಿದರು. ನೂತನ ಅಧ್ಯಕ್ಷರಾಗಿ ಅಶೋಕ್ ಕುಮಾರ್ ರೈ ಊರುಸಾಗು ಇವರು ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಮುರುಳ್ಯ ಎಣ್ಮೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷರಾದ ವಸಂತ ಹುದೇರಿ, ನಿರ್ದೇಶಕರಾದ ವಸಂತ ನಡುಬೈಲು, ಮಾಜಿ ಜಿ. ಪಂ. ಸದಸ್ಯೆ ಭಾಗೀರಥಿ ಮುರುಳ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಅಕ್ಷತಾ ಎ, ನಿರ್ದೇಶಕರಾದ ಸೀತಾರಾಮ ಗೌಡ, ಬಾಲಕೃಷ್ಣ ಗೌಡ, ಭುವನೇಶ್ವರ ಪಿ, ಶೂರಪ್ಪ ಗೌಡ ಎ, ಶ್ರೀಮತಿ ಪ್ರೇಮಲತಾ ರೈ, ಶ್ರೀಮತಿ ಚಂದ್ರಪ್ರಭಾ ಮುರುಳ್ಯ, ಸಂಘದ ಸಿಬ್ಬಂದಿ ಸುಂದರ ಎ, ಮತ್ತು ಕಾರ್ತಿಕ್ ರೈ ಕಲ್ಲೇರಿ ಉಪಸ್ಥಿತರಿದ್ದರು.