
ಕನಕಮಜಲು ಗ್ರಾಮ ಪಂಚಾಯತಿಯಲ್ಲಿ ಸಭಾಭವನದಲ್ಲಿ ರೋಜ್ ಗಾರ್ ದಿನಾಚರಣೆಯನ್ನು ಆಚರಿಸಲಾಯಿತು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಪಟ್ಟ ಮಾಹಿತಿಯನ್ನು ಸುಳ್ಯ ತಾಲೂಕು ಐಇಸಿ ಸಂಯೋಜಕರಾದ ನಮಿತಾ ನೀಡಿದರು. ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸರೋಜಿನಿ ಬಿ ಹಾಗೂ ಕಾರ್ಯದರ್ಶಿ ಉಪಸ್ಥಿತರಿದ್ದರು. ಹೊಸ ಉದ್ಯೋಗ ಚೀಟಿ ನೊಂದಣಿ ಕಾಮಗಾರಿ ಹಾಗೂ ಕೂಲಿ ಬೇಡಿಕೆಯನ್ನು ಈ ಸಂದರ್ಭದಲ್ಲಿ ಸ್ವೀಕರಿಸಲಾಯಿತು. ಗ್ರಾ.ಪಂ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಮಾಹಿತಿ ಕಾರ್ಯಕ್ರಮದ ಪ್ರಯೋಜನ ಪಡೆದರು.