ವಿದ್ಯಾರ್ಥಿಗಳಿಗೆ ತಮ್ಮ ಫಲಿತಾಂಶ ಬಂದಿತೆಂದರೆ ಖುಷಿಯ ಜೊತೆಗೆ ಮನದಲ್ಲಿ ಗೊಂದಲವೂ ಮನೆಮಾಡುತ್ತದೆ. ತಮ್ಮ ಮುಂದಿನ ಶೈಕ್ಷಣಿಕ ಬದುಕಿನ ಆಯ್ಕೆಯ ಬಗೆಗಿನ ಗೊಂದಲ, ಭಯ ಹಾಗೂ ಸೂಕ್ತ ಮಾರ್ಗದರ್ಶನದ ಕೊರತೆ ಕಾಡುವುದು ಸಾಮಾನ್ಯ. ಪಿ.ಯು.ಸಿ.ಯಲ್ಲಿ ಸೈನ್ಸ್, ಆರ್ಟ್ಸ್, ಕಾಮರ್ಸ್ ಕಲಿತ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಬಿ.ಕಾಂ, ಬಿ.ಸಿ.ಎ, ಬಿ.ಬಿ.ಎ, ಬಿ.ಎಸ್ಸಿ, ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣದ ಆಯ್ಕೆಯಲ್ಲದೆ ಮತ್ತೇನೂ ಇಲ್ಲ ಅಂದುಕೊಂಡಿರುತ್ತಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ, ಈ ಕೋರ್ಸುಗಳ ಹೊರತಾಗಿಯೂ ವೃತ್ತಿಪರ ಶಿಕ್ಷಣದಿಂದಲೂ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು ಎಂಬ ತಿಳುವಳಿಕೆಯನ್ನು ಪೋಷಕರು ಹಾಗೂ ಶಿಕ್ಷಕರು ನೀಡಬೇಕಾಗುತ್ತದೆ. ಇಂತಹ ವೃತ್ತಿಪರ ಕೋರ್ಸುಗಳಲ್ಲಿ ಫ್ಯಾಶನ್ ಡಿಸೈನಿಂಗ್ ಹಾಗೂ ಇಂಟೀರಿಯರ್ ಡಿಸೈನಿಂಗ್ ತನ್ನದೇ ಆದ ಛಾಪನ್ನು ಮೂಡಿಸುವುದರೊಂದಿಗೆ, ವಿಶ್ವದಾದ್ಯಂತ ಉದ್ಯೋಗದ ವಿಫುಲ ಅವಕಾಶಗಳನ್ನೂ ನೀಡುತ್ತಿದೆ.
ಪ್ರಸ್ತುತ ಕಾಲಘಟ್ಟದಲ್ಲಿ ಆರ್ಥಿಕ ಪರಿಸ್ಥಿತಿ ಕ್ಷೀಣಿಸಿದ್ದು, ಯುವಜನತೆಯಲ್ಲಿ ಭರವಸೆಯ ಬೆಳಕನ್ನು ಉತ್ತೇಜಿಸಲು ಈ ಕೋರ್ಸುಗಳ ಕ್ರಿಯಾತ್ಮಕ ಹಾಗೂ ಕಲಾತ್ಮಕವಾಗಿಯೂ ಸಹಕಾರಿಯಾಗಲಿದೆ. ಫ್ಯಾಶನ್ ಡಿಸೈನಿಂಗ್ ಪದವಿಯ ಮೂಲಕ ಮಾಡೆಲಿಂಗ್, ಸಿನಿಮಾರಂಗದಲ್ಲಿ ಡಿಸೈನರ್, ಅಂತರರಾಷ್ಟ್ರೀಯ ಕಂಪೆನಿಗಳಲ್ಲಿ ಮರ್ಚಂಡೈಸರ್, ಡಿಸೈನರ್ ಮೊದಲಾದ ಹುದ್ದೆಗಳನ್ನು ಗಳಿಸಬಹುದಲ್ಲದೆ ಸ್ವಉದ್ಯಮವನ್ನೂ ನಡೆಸಬಹುದಾಗಿದೆ. ಹಾಗೆಯೇ ಇಂಟೀರಿಯರ್ ಡಿಸೈನ್ ಆಂಡ್ ಡೆಕೊರೇಶನ್ ಪದವಿಯಿಂದ ಮಾಲ್ಸ್, ಹೋಟೆಲ್, ಮನೆ, ಕಛೇರಿ ಮೊದಲಾದವುಗಳ ವಿನ್ಯಾಸದ ಜೊತೆಗೆ ಅವುಗಳ ಪ್ಲಾನಿಂಗ್ ಮಾಡಿಕೊಡುವ ಕುಶಲತೆಯನ್ನೂ ಪಡೆದುಕೊಳ್ಳಬಹುದು. ಈ ಮೂಲಕ ದೊಡ್ಡ ದೊಡ್ಡ
ಕನ್ ಸ್ಟ್ರಕ್ಷನ್ ಕಂಪೆನಿಗಳಿಗೆ ಡಿಸೈನರ್ ಆಗಿ ಸೇವೆ ಸಲ್ಲಿಸಬಹುದು.
*ಉನ್ನತ ಉದ್ಯೋಗಕ್ಕೆ ಪ್ರೇರಣೆಯಾಗಲಿದೆ ಈ ಶಿಕ್ಷಣ…*
ಶಿಕ್ಷಣ ಕ್ಷೇತ್ರದಲ್ಲಿನ ಹಲವು ಬದಲಾವಣೆಗಳಿಗೆ ಅನುಗುಣವಾಗಿ ಉದ್ಯೋಗಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಫ್ಯಾಶನ್ ಡಿಸೈನಿಂಗ್ ಹಾಗೂ ಇಂಟೀರಿಯರ್ ಡಿಸೈನಿಂಗ್ ಕೋರ್ಸುಗಳಿಗೆ ಬೇಡಿಕೆ ಅಧಿಕವಾಗಿದ್ದು, ಶೇಕಡಾ ನೂರು ಉದ್ಯೋಗಾವಕಾಶ ಲಭಿಸುವ ಶಿಕ್ಷಣ ಇದಾಗಿದೆ. ದೇಶ – ವಿದೇಶಗಳಲ್ಲಿ ಈ ಶಿಕ್ಷಣ ಪೂರೈಸಿರುವ ಹಲವು ಮಂದಿ ಉನ್ನತ ಸ್ಥಾನದ ಕೆಲಸ ನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪುತ್ತೂರು ಹಾಗೂ ಆಸುಪಾಸಿನ ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೂಡ ಈ ಶಿಕ್ಷಣವನ್ನು ಪಡೆಯುವುದರ ಮೂಲಕ ಉನ್ನತ ಉದ್ಯೋಗ ಪಡೆದುಕೊಳ್ಳಲು ಈ ಸಂಸ್ಥೆಯು ಗುಣಮಟ್ಟದ ಶಿಕ್ಷಣ ಒದಗಿಸಲಿದೆ.