ಗ್ರಾಮಮಟ್ಟದಲ್ಲಿ ಕೋವಿಡ್ ಸೀಲ್ ಡೌನ್ ಲಾಕ್ಡೌನ್ ನಿಯಮಾವಳಿಗಳನ್ನು ಅನುಷ್ಠಾನಗೊಳಿಸುವವರು ಗ್ರಾಮ ಪಂಚಾಯಿತಿ ನವರು ಇಲ್ಲಿ ಪಿ.ಡಿ.ಒ.ಗಳು ಆದೇಶಗಳನ್ನು ಅನುಷ್ಠಾನ ಮತ್ತು ಉಸ್ತುವಾರಿ ಮಾಡುವವರು ಆದರೆ ಇವರೂ ಸ್ವತಂತ್ರರಲ್ಲ. ಸ್ವಯಂ ವಿವೇಚನೆಗೆ ಇವರಿಗೂ ಅವಕಾಶವಿಲ್ಲ. ಇವರನ್ನು ಕೇಳುವವರು ಹಲವು ಮಂದಿ ಇದ್ದಾರೆ. ಒಟ್ಟಿನಲ್ಲಿ ಕೋವಿಡ್ ಮಾರಿ ದೇಶದಾದ್ಯಂತ ಸಮಸ್ಯೆಗಳೊಂದಿಗೆ ವಿಚಿತ್ರಗಳನ್ನು ಗೊಂದಲಗಳನ್ನು ಸಂದೇಹಗಳನ್ನು ಉಂಟುಮಾಡಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಜನರಂತೂ ಹಿಂದಿನಂತೆ ಆಸ್ಪತ್ರೆಗಳಿಗೆ ಹೋಗುವುದೇ ಇಲ್ಲ ಮನೆಯಲ್ಲಿ ಕಷಾಯ ಕುಡಿದು ಕುಳಿತಿರುತ್ತಾರೆ ಹೋದರೆ ಇಲ್ಲಿ ಕೊರೋನಾವೆಂದು ಹಾಕುತ್ತಾರೋ ಎಂಬ ಭಯ ಇದಕ್ಕೊಂದು ನಿದರ್ಶನ ಅರಂತೋಡಿನ ಪ್ರಕರಣ.
ಇಲ್ಲಿ ಅಂಚೆ ವಿತರಕರಿಗೆ ಕೋವಿಡ್ ಪಾಸಿಟಿವ್ ಎಂದಾಯಿತು, ಅವರೊಂದಿಗೆ ಅವರ ಪತ್ನಿ ಮಕ್ಕಳಿಗೂ ಆ ಸಿಟ್ಟು ಎಂದಾಯಿತು. ಅಂಚೆ ವಿತರಕರು ಪೇಪರ್ ಏಜೆಂಟರೂ ಆಗಿರುವುದರಿಂದ ಅಂಚೆ ಕಚೇರಿಯ ಕೆಲಸದೊಂದಿಗೆ ಪೇಪರ್ ವಿತರಣೆಗಾಗಿ ಅವರಿಗೊಂದು ಟೇಬಲ್ ಇದೆ. ಅದು ಅರಂತೋಡಿನ ಬೇಕರಿಯ ಮುಂಭಾಗದಲ್ಲಿದೆ, ಇವರಿಗೆ ಪಾಸಿಟಿವ್ ಆದಕಾರಣ ಬೇಕರಿ ಹಾಗೆಯೇ ಪಕ್ಕದಲ್ಲಿರುವ ಹೋಟೆಲ್, ಟೈಲರ್ ಶಾಪ್, ಫ್ಯಾನ್ಸಿಯವರನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ. ಅಂಚೆಯ ಪೇಪರುಗಳು ಪತ್ರಗಳು ಅರಂತೋಡಿನ ಪೇಟೆಯಲ್ಲಿ ಅಲ್ಲದೆ ಸುತ್ತಮುತ್ತಲಿನ ಮನೆಗಳಿಗೂ ಹೋಗುತ್ತಿವೆ. ಇವರು ಅರಂತೋಡಿನ ಬಹುತೇಕ ಎಲ್ಲಾ ಅಂಗಡಿ ಕಚೇರಿಗಳಿಗೆ ಹೋಗಿದ್ದಾರೆ. ಅವರ ತಾಯಿಯ ತಿಥಿಕಾರ್ಯ ಹದಿನಾರರ ಕಾರ್ಯಕ್ರಮಗಳು ನಡೆದಿವೆ. ಇವುಗಳಲ್ಲಿ ಪಾಲ್ಗೊಂಡವರೂ ಇದ್ದಾರೆ.
ಕೋವಿಡ್ ನಿಯಂತ್ರಣದ ಸಾಮಾಜಿಕ ಅಂತರ ನಿಯಮದಂತೆ ಲಾಕ್ ಡೌನ್, ಸೀಲ್ ಡೌನ್, ಬಂದ್ , ಕ್ವಾರಂಟೈನ್ ಗಳನ್ನು ಮಾಡಿದರೆ ಸಂಪೂರ್ಣ ಅರಂತೋಡು ಮಾತ್ರವಲ್ಲದೆ ಅರಂತೋಡಿನಿಂದ ಹೊರಗೂ ವ್ಯಾಪಿಸುತ್ತದೆ ವಿಷಯ ಹೀಗಿದ್ದು, 2 – 3 ಅಂಗಡಿಗಳಿಗೆ ಮಾತ್ರ ಬಂದ್ ಮಾಡುವ ಕ್ರಮದ ಬಗ್ಗೆ ಕೇಳಿದರೆ ಪಿ.ಡಿ.ಒ.” ಇದಕ್ಕೆ ನಾನೇನು ಮಾಡಲಿ ಸಮಸ್ಯೆಯ ಮೂಲವ್ಯಕ್ತಿ ಅಂಚೆವಿತರಕರ ಹೇಳಿಕೆಯಲ್ಲಿ ನಿಮ್ಮ ಹೆಸರುಗಳು ಮಾತ್ರ ಇವೆ ಎನ್ನುತ್ತಾರೆ. ಒಟ್ಟಿನಲ್ಲಿ ಯಾವ ಪ್ರಶ್ನೆಗಳಿಗೂ ನಿಖರವಾದ ಉತ್ತರವಿಲ್ಲದೆ ಒಂದೆರಡು ಅಂಗಡಿಗಳಿಗೆ ಬಂದ್ ಮಾಡುವ ಶಿಕ್ಷೆ ಒದಗಿರುವುದು ಕೋವಿಡ್ -19 ನ ವಿಚಿತ್ರ ಮಹಾತ್ಮೆ ಎನ್ನಬೇಕಷ್ಟೇ ಎಂದು ನೊಂದ ವರ್ತಕರೊಬ್ಬರು ಅಳಲನ್ನು ತೋಡಿಕೊಂಡಿದ್ದಾರೆ.
ಅರಂತೋಡು ಗ್ರಾ.ಪಂ. ಪಿಡಿಓ ಈ ಬಗ್ಗೆ ಪ್ರತಿಕ್ರಿಯಿಸಿ ಈ ಪ್ರಕರಣದಲ್ಲಿ ಕೊರೊನ ಸೋಂಕಿತರು ನೀಡಿದ ಹೇಳಿಕೆಯ ಪ್ರಕಾರ ಆರೋಗ್ಯ ಇಲಾಖೆಯ ಮಾರ್ಗದರ್ಶನದಂತೆ ಅರಂತೋಡಿನ 50 ಹಾಗೂ ಹೊರಗಿನ 22 ಜನರನ್ನು ಕಾರಂಟೈನ್ ನಲ್ಲಿರಲು ಸೂಚಿಸಲಾಗಿತ್ತು. ಕಾರಂಟೈನ್ ನಲ್ಲಿರುವವರು ಅಂಗಡಿಗೆ ಬಂದು ವ್ಯಾಪಾರ ನಡೆಸುವಂತಿಲ್ಲ. ಅವರು ಬೇರೆ ಜನ ಮಾಡಿ ವ್ಯಾಪಾರ ಮಾಡಲು ಸೂಚಿಸಿದ್ದೆವು. ಪಾಸಿಟಿವ್ ಬಂದ ವ್ಯಕ್ತಿಯ ಜತೆ 15 ನಿಮಿಷಗಳ ಕಾಲ ಸಂಪರ್ಕಿತರಾಗಿದ್ದವರು ಮಾತ್ರ ಪ್ರಾಥಮಿಕ ಸಂಪರ್ಕವಾಗಿ ಕಾರಂಟೈನ್ ಗೊಳಪಡುತ್ತಾರೆ. ಈ ಹಿನ್ನೆಲೆಯಲ್ಲಿ ಕೊರೊನ ಪಾಸಿಟಿವ್ ವ್ಯಕ್ತಿಗಳನ್ನು ನೀಡಿದ ಹೇಳಿಕೆಯಂತೆ ಕ್ರಮ ಜರುಗಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.