ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೂಮಿ ಖರೀದಿಸುವ ಪ್ರಯುಕ್ತವಾಗಿ 2 ಸೆಂಟ್ಸ್ ಜಾಗದ ಹಣದ ಮೊತ್ತ ಒಂದು ಲಕ್ಷದ ಅರುವತ್ತು ರೂಪಾಯಿ ಡಿಡಿಯನ್ನು ನಿವೃತ್ತ ಉಪವಲಯಾರಣ್ಯಧಿಕಾರಿ ಕಾಯರ್ ತಿಮ್ಮಪ್ ಗೌಡ ಆ.26 ರಂದು ಹಸ್ತಾಂತರಿಸಿದರು. ದಿವಂಗತ ಪುತ್ರ ಕೆ.ಟಿ.ಪ್ರಭವ ಸ್ಮರಣಾರ್ಥವಾಗಿ ಈ ಧನಸಹಾಯವನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಸಮ್ಮುಖದಲ್ಲಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಅವರನ್ನು ದೇವಸ್ಥಾನದ ವತಿಯಿಂದ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು .ಈ ಸಂದರ್ಭದಲ್ಲಿ ಬೆಳ್ಳಾರೆಯ ಸೇವಾ ಭಾರತಿಯ ಸದಸ್ಯರು, ಚಂದ್ರಶೇಖರ್ ಪನ್ನೆ, ಪ್ರೇಮ್ ಸ್ಟುಡಿಯೋ ಬೆಳ್ಳಾರೆ, ಜಯಂತ ಮಡಪ್ಪಾಡಿ, ಹಿಂದೂ ಜಾಗರಣ ತಾಲೂಕು ಸಂಚಾಲಕ ಸಂತೋಷ್ ಕೊಡಿಯಾಲ, ಗೌಡ ಸಂಘದ ತಾಲೂಕು ಉಪಾಧ್ಯಕ್ಷ ಚಂದ್ರ ಕೋಲ್ಚಾರ್ , ವೈಪಾಲ ರಾಮಣ್ಣ ರೈ ಪೆರುವಾಜೆ, ರಮಾನಾಥ್ ಜಿ ಅಂಕತಡ್ಕ, ಅಮ್ಮ ಭಗವಾನ್ ಸೇವಾ ಸಮಿತಿಯ ಸಂಚಾಲಕರು, ಮಂಡೆಪು ಕೃಷ್ಣಪ್ಪ ಶೆಟ್ಟಿ , ಕಸ್ಟಮ್ಸ್ ನಿವೃತ್ತ ಅಧಿಕಾರಿ ರಾಮಕೃಷ್ಣ ಭಟ್ ಕುರುಮಾ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುನಿಲ್ ರೈ,ಸದಸ್ಯ ಜಯರಾಮ ರವರು ದೇವಸ್ಥಾನದ ಪರವಾಗಿ ವಂದನೆ ಸಲ್ಲಿಸಿದರು.
- Monday
- November 25th, 2024