ಅಯ್ಯನಕಟ್ಟೆಯ ಪ್ರಧಾನ ರಸ್ತೆಯಲ್ಲಿರುವ ಕೆ.ಎಸ್ ಕಾಂಪ್ಲೆಕ್ಸ್ ನಲ್ಲಿ ಶ್ರೀ ಲಕ್ಷ್ಮೀ ಜನರಲ್ ಸ್ಟೋರ್ಸ್ ಆಗಸ್ಟ್ 21ರಂದು ಶುಭಾರಂಭಗೊಂಡಿತು. ಅಯ್ಯನಕಟ್ಟೆ, ಕಳಂಜ ಪರಿಸರದ ಜನತೆಗೆ ದಿನನಿತ್ಯದ ಗೃಹಬಳಕೆಗೆ ಅಗತ್ಯವಾದ ದಿನಸಿ ಹಾಗೂ ತರಕಾರಿ ಸಾಮಾಗ್ರಿಗಳು ಉತ್ಕೃಷ್ಟ ಹಾಗೂ ಸ್ವಚ್ಛತೆಯ ವ್ಯವಹಾರದೊಂದಿಗೆ ಇಲ್ಲಿ ದೊರೆಯಲಿದೆ. ಅಲ್ಲದೆ 2 ಕಿ.ಮೀ ಅಂತರದಲ್ಲಿ ಸಾಮಾಗ್ರಿಗಳ ‘ಹೋಂ ಡೆಲಿವರಿ’ ವ್ಯವಸ್ಥೆ ಮಾಡಲಾಗುವುದೆಂದು ಮಾಲಕ ಆನಂದ ಗೌಡ ಬೊಳ್ಳಾಜೆ ತಿಳಿಸಿದ್ದಾರೆ.
- Tuesday
- December 3rd, 2024