ಶ್ರೀ ಚೈತನ್ಯ ಸೇವಾಶ್ರಮ, ದೇವರಕಳಿಯ, ಅಜ್ಜಾವರ, ಇಲ್ಲಿ, ಗಣೇಶ ಚತುರ್ಥಿಯನ್ನು ಆಚರಿಸಲಾಯಿತು. ವಿಘ್ನವಿನಾಶಕ ಗಣಪತಿಯ ಪೂಜೆಯನ್ನು ಶ್ರೀ ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿಯವರು ನೆರವೇರಿಸಿದರು. ಶ್ರೀ ಸ್ವಾಮಿಜಿಯವರ ಕೃತಿಗಳಾದ ‘ಗುರುವಿನೆಡೆಗೆ ನಮ್ಮ ನಡೆ’ ಮತ್ತು ‘ಕರ್ಮ ರಹಸ್ಯ’ ಇವುಗಳನ್ನು ಆಶ್ರಮದ ಟ್ರಸ್ಟಿಯಲೋರ್ವರಾದ ಕು. ಪ್ರಣವಿ ಯಂ. ಅವರು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಶ್ರೀ ಸ್ವಾಮಿಜಿಯವರು ಸ್ವಾರ್ಥ, ಲೋಹಗಳನ್ನು ಅಳಿಸಿ ನೈತಿಕ, ಆಧ್ಯಾತ್ಮಿಕ ಜೀವನವನ್ನು ನಡೆಸುವ ಅವಶ್ಯಕತೆಯನ್ನು ಮತ್ತು ಕರ್ಮ ಯೋಗವನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
- Tuesday
- December 3rd, 2024