
ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಆ. 22 ರಂದು ಗಣೇಶ ಚೌತಿಯಂದು ಬೆಳಿಗ್ಗೆ ಗಣ ಹೋಮ, ಕದಿರು ವಿತರಣೆ ಸೀಮಿತ ಭಕ್ತರೊಂದಿಗೆ ಸಾಂಕೇತಿಕವಾಗಿ ನಡೆಯಿತು.
ಬೆಳಿಗ್ಗೆ ಗಣಪತಿ ಹೋಮ, ನಂತರ ಕದಿರು ಕೊಡುವ ಕಾರ್ಯಕ್ರಮವನ್ನು ನೆರವೇರಿತು. ಬಳಿಕ ಸಂಪಾಜೆ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಗೌರಿ ಗಣೇಶನ ಮೂರ್ತಿಯನ್ನು ದೈವಿಕ ವಿಧಿ ವಿಧಾನದಲ್ಲಿ ಸ್ಥಾಪಿಸಿ ಪೂಜಿಸಲಾಯಿತು. ಸಂಪಾಜೆಯ ವಿವಿಧ ಭಜನಾ ತಂಡಗಳಿಂದ ಭಜನೆ ಕಾರ್ಯಕ್ರಮ ನಡೆಯಿತು ಸಂಜೆ 4.30 ಗಂಟೆಗೆ ಸರಿಯಾಗಿ ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬಳಿಯ ಹೊಳೆಯಲ್ಲಿ ಜಲಾವೃತ ಮಾಡಲಾಯಿತು, ಸೀಮಿತ ಭಕ್ತರೊಂದಿಗೆ ಸಾಮಾಜಿಕ ಅಂತರದೊಂದಿಗೆ ಸಾಂಕೇತಿಕವಾಗಿ ಕಾರ್ಯಕ್ರಮ ನಡೆಯಿತು.