ಆಲೆಟ್ಟಿ ಮತ್ತು ಅಜ್ಜಾವರ ಗ್ರಾಮ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಆಗಬೇಕೆಂಬ ದಶಕಗಳ ಬೇಡಿಕೆಗೆ ಕಾಲಕೂಡಿಬಂದಿದೆ. ನಾರ್ಕೊಡು ಅಜ್ಜಾವರ ರಸ್ತೆಯ 6.75 ಕಿ.ಮೀ. ಸುಮಾರು 6.54 ಕೋಟಿ ರೂಗಳಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಅಭಿವೃದ್ಧಿಯಾಗಲಿದೆ.
ಆ. 25 ರಂದು ಈ ರಸ್ತೆಯ ಗುದ್ದಲಿ ಪೂಜೆ ಸಮಾರಂಭವು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ಎಸ್ ಅಂಗಾರರ ನೇತೃತ್ವದಲ್ಲಿ ನಡೆಯಲಿದೆ ಎಂದು ಬಿಜೆಪಿ ಮಂಡಲ ಸಮಿತಿ ಪ್ರ.ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ತಿಳಿಸಿದ್ದಾರೆ.
- Thursday
- November 21st, 2024