ಸುಳ್ಯ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಲೋಕಕಲ್ಯಾಣಕ್ಕಾಗಿ ಸುಳ್ಯ ದ ಜೀವ ನದಿ ಪಯಸ್ವಿನಿ ನದಿಗೆ ಬಾಗಿನ ಅರ್ಪಣೆ ಮಾಡಲಾಯಿತು. ನಾಗಪಟ್ಟಣ ಸೇತುವೆ ಬಳಿ ನಡೆದ ಸರಳ ಕಾರ್ಯಕ್ರಮ ದಲ್ಲಿ ನಾಗಪಟ್ಟಣ ಸದಾಶಿವ ದೇವಸ್ಥಾನ ದ ಅರ್ಚಕರು ಪಯಸ್ವಿನಿ ಗೆ ಪೂಜೆ ನೆರವೇರಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಳಾದ ಗೋಕುಲ್ ದಾಸ್, ಧರ್ಮ ಪಾಲ ಕೊಯಿಂಗಾಜೆ,ಡಿ ಸಿ ಸಿ ಕಾರ್ಯದರ್ಶಿ ಪಿ ಎಸ್ ಗಂಗಾಧರ, ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ ಜೆ, ಬ್ಲಾಕ್ ಕಾಂಗ್ರೆಸ್ ಮಾದ್ಯಮ ಸಂಯೋಜಕ ಭವಾನಿ ಶಂಕರ್ ಕಲ್ಮಡ್ಕ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರಾಧಾಕೃಷ್ಣ ಪರಿವಾರಕಾನ, ಚೇತನ್ ಕಜೆಗದ್ದೆ, ಮಧುಸೂದನ ಬೂಡು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
- Tuesday
- December 3rd, 2024