
ಕೆವಿಜಿ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಕೊಲ್ಲಮೊಗ್ರದ ಸತ್ತಾರ್ (35) ಎಂಬ ಯುವಕ ಮಾನಸಿಕ ಅಸ್ವಸ್ಥರಾಗಿ ಚಿಕಿತ್ಸೆ ಎರಡು ದಿನಗಳ ಹಿಂದೆ ಸುಳ್ಯ ಕೆವಿಜಿ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಇಂದು ಸಂಜೆ ವೇಳೆಗೆ ಅವರು ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿದರೆಂದು ತಿಳಿದು ಬಂದಿದೆ. ಅವರನ್ನು ಜೊತೆಗಿದ್ದ ವ್ಯಕ್ತಿ ಅವರನ್ನು ರಕ್ಷಿಸಲು ಯತ್ನಿಸಿದರಾದರೂ, ಆ ವೇಳೆಗಾಗಲೇ ಆತ ಹಾರಿದರೆಂದು ತಿಳಿದುಬಂದಿದೆ. ಕೆಳಕ್ಕೆ ಬಿದ್ದು ತೀವ್ರ ಜಖಂಗೊಂಡ ಸತ್ತಾರ್ ಗೆ ಕೂಡಲೇ ಚಿಕಿತ್ಸೆ ನೀಡಿದರೂ ಫಲ ಕಾಣದೆ ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ. ತಾಯಿ ಹಾಗೂ ಸಹೋದರರೊರ್ವನನ್ನು ಅಗಲಿದ್ದಾರೆ.ಪ್ರಸ್ತುತ ಇವರು ಅಡ್ಕಾರಿನಲ್ಲಿ ನೆಲೆಸಿದ್ದರು ಎಂದು ತಿಳಿದುಬಂದಿದೆ.