Ad Widget

ಈ ನತದೃಷ್ಟ ತಾಯಿ-ಮಗನಿಗೆ ಸಹಾಯ ಮಾಡುವಿರಾ?

ಪ್ರಪಂಚದಲ್ಲಿ ಕಷ್ಟ ಪಟ್ಟವನೇ ಮತ್ತೆ ಕಷ್ಟಪಡಬೇಕೆಂಬ ನಿಯಮವನ್ನು ಭಗವಂತ ಬರೆದಿದ್ದಾನೋ ಏನೋ? ಇಲ್ಲವಾದಲ್ಲಿ ಈ ರೀತಿಯ ದುರದೃಷ್ಟಕರ ಪರಿಸ್ಥಿತಿ ಈ ತಾಯಿ ಮಗನಿಗೆ ಅದೇಕೆ ಕೊಟ್ಟನೋ ಗೊತ್ತಿಲ್ಲ. ಹೌದು. ಈ ನತದೃಷ್ಟರ ಬದುಕು ಕಂಡಾಗ ಯಾರಿಗಾದರೂ ಕರುಳು ಚುರುಕ್ ಎನ್ನದಿರದು?.
ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಹೊನ್ನಡಿಯಲ್ಲಿ ಹರಕು ಜೋಪಡಿಯಲ್ಲಿ ಬದುಕು ಸಾಗಿಸುತ್ತಿರುವ ವೃದ್ದೆ ಸರಸ್ವತಿಯ ಬದುಕು ಇದೀಗ ಮೂರಾಬಟ್ಟೆಯಾಗುವ ಸ್ಥಿತಿ ತಲುಪಿದೆ. ಅವರಿವರ ಕಸ-ಮುಸುರೆ ತಿಕ್ಕಿ, ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಈಕೆಯ ಬಾಳಲ್ಲಿ ವಿಧಿ ಕ್ರೂರತೆಯನ್ನೇ ಮೆರೆದಿದ್ದಾನೆ. ಜೊತೆಗೆ ಇರುವ ಮೂಗ ಮಗ ಕ್ಯಾನ್ಸರ್ ಗೆ ಒಳಗಾಗಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಸರಸ್ವತಿಗೆ ಇಬ್ಬರು ಗಂಡು ಮಕ್ಕಳು, ಅವರಲ್ಲಿ‌ ಹಿರಿಯ ಮಗ ಮದುವೆಯಾಗಿ ಪ್ರತ್ಯೇಕವಾಗಿದ್ದು, ಕಿರಿಯ ಮಗ ಹುಟ್ಟು ಕಿವುಡ ಹಾಗೂ ಮೂಗ. ಮಾತು ಬಾರದ ಈತ ತನ್ನಿಂದ ಸಾದ್ಯವಾದ ಕೆಲಸ ಮಾಡುತ್ತಾ, ತಾಯಿಯೊಂದಿಗೆ ಜೀವಿಸುತ್ತಿದ್ದ. ಕಡು ಬಡತನದಲ್ಲಿ ಜೀವಿಸುತ್ತಿದ್ದ ಈ ತಾಯಿ ಮಗನಿಗೆ ಆಸರೆಯಾಗಿದ್ದು ಆ ಒಂದು ಮನೆ. ಆದರೆ ಕಳೆದೆರಡು ವರ್ಷಗಳ ಹಿಂದೆ ಮನೆ ಕುಸಿದುಹೋಗಿದ್ದು, ಇರುವ ಮಾಡಿಗೆ ಯಾರೋ ಕೊಟ್ಟ ಪ್ಲಾಸ್ಟಿಕ್ ಹೊದಿಕೆಯೇ ಗತಿಯಾಯ್ತು. ಇಷ್ಟಕ್ಕೇ ಮುಗಿದಿದ್ದರೆ ಪರವಾಗಿರಲಿಲ್ಲ. ಮಳೆ ಗಾಳಿಯ ನಡುವೆ ಪ್ಲಾಸ್ಟಿಕ್ ಜೋಪಡಿಯಲ್ಲಿ ಬದುಕು ಹರಿಸುತ್ತಿದ್ದ ಇವರ ಪಾಲಿಗೆ ಅದೊಂದು ಮೃತ್ಯುಪಾಶ ಬಂದೆರಗಿದೆ. ಗಂಟಲು ನೋವು ಎಂದು ಆರಂಭವಾದ ವೇದನೆ ಇದೀಗ ಕ್ಯಾನ್ಸರ್ ವರೆಗೆ ತಲುಪಿದೆ. ಸಣ್ಣಪುಟ್ಟ ಕ್ಲಿನಿಕ್ ಗಳಲ್ಲಿ ಮಗನಿಗೆ ಚಿಕಿತ್ಸೆ ಕೊಡಿಸಿದ ಸರಸ್ವತಿ, ಮಗನ ನರಳಾಟ ನೋಡಿ ಸಾಲ ಮಾಡಿ ತಜ್ಞರ ಬಳಿ ತೋರಿಸಿದಾಗ ಮಗ ವೆಂಕಪ್ಪನಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಮೊದಲೇ ಮೂರು ಹೊತ್ತು ಸರಿಯಾಗಿ ಊಟ ಮಾಡದ ಪರಿಸ್ಥಿತಿ ಇರುವ ಸರಸ್ವತಿ ಕುಟುಂಬಕ್ಕೆ ವೈದ್ಯರ ಹೇಳಿಕೆ ಬರಸಿಡಿಲು ತಲೆಗೆ ಬಡಿದಂತಾಗಿದೆ. ಒಪ್ಪೊತ್ತಿನ ಊಟಕ್ಕೆ ಪರದಾಟ ನಡೆಸುತ್ತಿರುವಾಗ ಮಗನಿಗೆ ಚಿಕಿತ್ಸೆ ಕೊಡಿಸುವುದು ಕನಸಿನ ಮಾತಾಗಿದೆ. ಕೈಕಾಲು ಬಲಗುಂದಿರುವ ಸರಸ್ವತಿ ತೋಚದಂತಾಗಿ ಸಹೃದಯರ ನೆರವನ್ನು ಕೋರುತ್ತಿದ್ದಾರೆ. ಧನ ಸಹಾಯ ನೀಡಬಯಸುವ ಉದಾರಿಗಳು ಸರಸ್ವತಿ ಅವರ ಖಾತೆ ಸಂಖ್ಯೆ 124901010006842, ವಿಜಯ ಬ್ಯಾಂಕ್ ದೊಡ್ಡತೋಟ ಶಾಖೆ, ಐಎಫ್ ಎಸ್ ಸಿ ಕೋಡ್, VIJB0001249 ಇಲ್ಲಿಗೆ ಜಮೆ ಮಾಡಬಹುದು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!