ಸುಳ್ಯ ತಾಲೂಕಿನ ಹಲವೆಡೇ ರಸ್ತೆ ಅಭಿವೃದ್ಧಿ ಕಂಡರೂ ಈ ಗುತ್ತಿಗಾರು ಬಳ್ಪ ರಸ್ತೆ ಮಾತ್ರ ಹದಗೆಟ್ಟು ಪ್ರಯಾಣಿಕರು ನರಳಾಡುವಂತೆ ಆಗಿದೆ. ಈ ರಸ್ತೆಯಲ್ಲೊಮ್ಮೆ ಪ್ರಯಾಣಿಸಿದ ಪ್ರತಿಯೊಬ್ಬನೂ ಶಾಪ ಹಾಕದೇ ಹೋದವರು ಇರಲಿಕ್ಕಿಲ್ಲ ಅಲ್ಲವೇ.? ಬಳ್ಪ ಕಮಿಲ ರಸ್ತೆಗೆ ಕೆಲವೆಡೆ ಅಭಿವೃದ್ಧಿ ಆದರೇ ಹಲವೆಡೆ ಸಂಪೂರ್ಣ ಹದಗೆಟ್ಟಿದ್ದು ದಶಕಗಳ ಹಿಂದೆ ಹಾಕಿದ ಡಾಮರ್ ಮಾಯವಾಗಿದೆ. ಇದರಿಂದ ಮಣ್ಣಿನ ರಸ್ತೆಯಾದ್ರೂ ಆಗಬಹುದು ಎನ್ನುವಂತಿದೆ.
ವರ್ಷಕ್ಕೆ ಒಂದು ಇನ್ನೂರು, ಮುನ್ನೂರು ಮೀಟರ್ ಅಭಿವೃದ್ಧಿ ಕಾಣುತ್ತಿದೆ. ಗುತ್ತಿಗಾರು- ಬಳ್ಪ ರಸ್ತೆ ಸಂಪೂರ್ಣ ಆಗಲು ಇನ್ನೆಷ್ಟೋ ವರ್ಷ ಕಾಯಬೇಕಿದೆ ಎಂಬುದು ಕಮಿಲ ರಸ್ತೆಯಲ್ಲಿ ದಿನ ಸಂಚರಿಸುವವರ ಗೋಳಾಗಿದೆ. ಇನ್ನೊಂದು ಪರ್ಯಾಯ ರಸ್ತೆಯಾಗಿರುವ ಗುತ್ತಿಗಾರು ಬಳ್ಳಕ್ಕ ಪಂಜ ರಸ್ತೆ ಕೂಡ ಸಂಪೂರ್ಣ ಅಭಿವೃದ್ಧಿ ಕಾಣದೇ ಅದರಲ್ಲಿ ಕೂಡ ಸಂಚಾರ ದುಸ್ತರವಾಗಿದೆ.
ಗುತ್ತಿಗಾರು ನಡುಗಲ್ಲು ಹರಿಹರ ಭಾಗದ ಜನ ಪುತ್ತೂರು ತೆರಳಬೇಕಾದರೇ ಇದೇ ಗುತ್ತಿಗಾರು ಬಳ್ಪ ರಸ್ತೆಯನ್ನು ಹೆಚ್ಚು ಬಳಸುತ್ತಾರೆ. ಈ ಹಿಂದೆ ತುರ್ತು ಅಭಿವೃದ್ಧಿ ಆಗಬೇಕಿತ್ತು. ಆದರೇ ಜನಪ್ರತಿನಿಧಿಗಳ ನಿರ್ಲಕ್ಷ್ಯವೋ, ರಸ್ತೆಗೆ ತಟ್ಟಿದ ಶಾಪವೋ ಗೊತ್ತಿಲ್ಲ ರಸ್ತೆ ಸಂಪೂರ್ಣ ಅಭಿವೃದ್ಧಿ ಮಾತ್ರ ಕಂಡಿಲ್ಲ. ಏನೇ ಆಗಲಿ ಆದಷ್ಟೂ ಶೀಘ್ರ ಜನರ ಬೇಡಿಕೆ ಈಡೇರುವಂತಾಗಲಿ.
- Saturday
- November 23rd, 2024