ಸುಳ್ಯ ಸರಕಾರಿ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿರುವ ರೋಗಿಗಳಿಗೆ ಬಿಸಿನೀರಿನ ವ್ಯವಸ್ಥೆ ಇಲ್ಲದೇ ಜ್ವರ ಭಾದಿತರು ಕೂಡ ತಣ್ಣೀರು ಸ್ನಾನ ಮಾಡುವ ಅನಿವಾರ್ಯತೆ ಎದುರಾಗಿತ್ತು. ಈ ಬಗ್ಗೆ ರೋಗಿಗಳು ಆಸ್ಪತ್ರೆಯ ವೈಧ್ಯಾಧಿಕಾರಿಗಳಿಗೆ, ತಾಲೂಕು ಆಡಳಿತಕ್ಕೆ ಮನವಿ ಮಾಡಲಾಗಿತ್ತು. ಕೋವಿಡ್ ವಿಭಾಗಕ್ಕೆ ಗೀಸರ್ ಅಳವಡಿಸಲು ಯಾರು ಇಲೆಕ್ಟ್ರೀಷಿಯನ್ ಗಳು ಬರುತ್ತಿಲ್ಲ ಎಂದು ನಿರ್ಲಕ್ಷ್ಯದ ಉತ್ತರ ನೀಡಿತ್ತು. ಒರ್ವ ಪೇಶೆಂಟ್ ಇಲ್ಲಿನ ವ್ಯವಸ್ಥೆ ಗೆ ಬೇಸತ್ತು ಖಾಸಗಿ ಆಸ್ಪತ್ರೆಗೆ ಹೋಗಿ ದಾಖಲಾದ ಪ್ರಸಂಗವೂ ನಡೆದಿತ್ತು.
ಈ ಬಗ್ಗೆ ರೋಗಿಗಳ ದೂರಿನ ಹಿನ್ನೆಲೆಯಲ್ಲಿ ಅಮರ ಸುದ್ದಿ ವರದಿ ಪ್ರಕಟಿಸಿತ್ತು. ಸುಳ್ಯ ಕಾರ್ಯನಿಮಿತ್ತ ಬರಲಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಯವರು ಸರಕಾರಿ ಆಸ್ಪತ್ರೆಯ ಕೋವಿಡ್ ವಿಭಾಗಕ್ಕೆ ಕೂಡ ಭೇಟಿ ಮಾಡಿ ಪೇಶೆಂಟ್ ಗಳ ಸಮಸ್ಯೆ ಪರಿಹರಿಸುವಂತೆ ವರದಿ ಪ್ರಕಟಿಸಿತ್ತು. ಮತ್ತು ವರದಿಯನ್ನು ಸಚಿವರ ವಾಟ್ಸಾಪ್ ಗೆ ತಲುಪಿಸಲಾಗಿತ್ತು.
ಮರುದಿನ ಸುಳ್ಯಕ್ಕೆ ಬಂದಿದ್ದ ಸಚಿವರಿಗೆ ಪತ್ರಕರ್ತರು ಸರಕಾರಿ ಆಸ್ಪತ್ರೆಯ ಸಮಸ್ಯೆ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಕೂಡಲೇ ಸ್ಪಂದಿಸಿದ ಸಚಿವರು ಗೀಸರ್ ಆಳವಡಿಸಲು ಆರೋಗ್ಯಧಿಕಾರಿಗಳಿಗೆ ಸೂಚಿಸಿದ್ದರು.ಅದರಂತೆ ಇಂದು ಆಸ್ಪತ್ರೆ ಕೋವಿಡ್ ವಿಭಾಗಕ್ಕೆ ಬಿಸಿನೀರಿನ ವ್ಯವಸ್ಥೆಗೆ ಗೀಸರ್ ಅಳವಡಿಕೆ ಮಾಡಲಾಗಿದೆ. ಕೋವಿಡ್ ವಿಭಾಗದ ರೋಗಿಗಳು ಸಚಿವರು, ವೈಧ್ಯಾಧಿಕಾರಿ, ಮಾಧ್ಯಮಕ್ಕೆ ಈ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.
- Thursday
- November 21st, 2024