ಭಾರತಿಯ ಭೂ ಸೇನೆಯಲ್ಲಿ ಕರ್ತವ್ಯದಲ್ಲಿರುವ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಸುಧಾನಂದ ಮಾವಿನಕಟ್ಟೆ ಅವರಿಗೆ ಸ್ವಾತಂತ್ಯೋತ್ಸವದ ಪ್ರಯುಕ್ತ ‘ಕ್ಯಾಪ್ಯನ್’ ಆಗಿ ವಿಶೇಷ ಭಡ್ತಿ ನೀಡಿ ಭಾರತ ಸರ್ಕಾರ ಗೌರವಿಸಿತು. ಇವರು ಭಾರತೀಯ ಭೂ ಸೇನಾ ಮಿಲಿಟರಿ ಪೋಲಿಸ್ ವಿಭಾಗದಲ್ಲಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಇವರು ಸೇನಾ ಕಾರ್ಯಾಚರಣೆಗಳಾದ ಆಪರೇಷನ್ ವಿಜಯ್ (ಕಾರ್ಗಿಲ್ ಕದನ)ಆಪರೇಷನ್ ಪರಾಕ್ರಮ , ಆಪರೇಷನ್ ರಕ್ಷಕ್ ,(ಜಮ್ಮು ಮತ್ತು ಕಾಶ್ಮೀರ)ಆಪರೇಷನ್ ರೆನು(ಅಸ್ಸಾಂ)ಮೊದಲಾದ ಸೇನಾ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ. ಇವರು 1990 ಡಿಸೆಂಬರ್ 26 ರಂದು ಭಾರತೀಯ ಭೂ ಸೇನೆಯನ್ನು ಸೇರಿ ಬೆಂಗಳೂರಲ್ಲಿ ತರಭೇತಿ ಪಡೆದು ಸುಮಾರು 11 ವರ್ಷ ಜಮ್ಮು ಜಮ್ಮು ಮತ್ತು ಕಾಶ್ಮೀರದ ವಿವಿಧ ಭಾಗಗಳನ್ನು ಸೇವೆ ಸಲ್ಲಿಸಿರುತ್ತಾರೆ. ಅಲ್ಲದೆ ಅಸ್ಸಾಂ ,ಉತ್ತರ ಪ್ರದೇಶ ,ಮುಂಬಯಿ,ಪಂಜಾಬು,ಸಿಕ್ಕಿಂ ಮೊದಲಾದ ಕಡೆ ಸೇವೆ ಸಲ್ಲಿಸಿ ಈಗ ಬೆಂಗಳೂರಿನಲ್ಲಿ ಸೇನೆಯ ತರಭೇತಿ ಕೇಂದ್ರದಲ್ಲಿ ತರಭೇತಿ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇವರು ಮಾವಿನಕಟ್ಟೆ ಕೃಷ್ಣ ಮಣಿಯಾಣಿ ಹಾಗೂ ಜಾನಕಿಯವರ ಪುತ್ರರಾಗಿರುತ್ತಾರೆ ಇವರ ಇನ್ನೊಬ್ಬ ಸಹೋದರ ರಾಜೇಶ್ ಪಿ ಕೂಡ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಇವರ ಪತ್ನಿ ಶಾಂತಾಮಣಿ ಪೆರುವಾಜೆಯ ಸರಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಮಕ್ಕಳಾದ ಸುಸ್ಮಿತಾ ಪಿ.9ನೇ ತರಗತಿ ಸಾಂಧೀಪನಿ ಶಾಲೆ ನರಿಮೊಗರು ಪುತ್ತೂರು ಹಾಗೂ ಮಗ ಹೀತೇಶ್ ಪಿ.4 ನೇ ತರಗತಿ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆಯಲ್ಲಿ ಓದುತಿದ್ದಾರೆ. ಇವರು ಪೆರುವಾಜೆಯಲ್ಲಿ ನೆಲೆಸಿದ್ದಾರೆ.
- Thursday
- November 21st, 2024