ಅಭಿಯಾನ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ರಕ್ತದಾನಿ ಬಳಗ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಜಿಲ್ಲೆಯಾದ್ಯಂತ ರಕ್ತದಾನ ಅಭಿಯಾನ ಆಗಸ್ಟ್ 19 ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿದೆ. ಸುಮಾರು 12 ವಲಯಗಳಲ್ಲಿ ಹಾಗೂ 20 ಕ್ಕಿಂತ ಅಧಿಕ ರಕ್ತದಾನ ಕ್ಯಾಂಪ್ ಗಳು ನಡೆಯಲಿದ್ದು ತುರ್ತು ಸಂಧರ್ಭಗಳಲ್ಲಿ ಜಿಲ್ಲೆಯ ಎಲ್ಲಾ ಬ್ಲಡ್ ಬ್ಯಾಂಕುಗಳಲ್ಲಿ ಕೂಡ ವಿಖಾಯ ಕಾರ್ಯಕರ್ತರು ರಕ್ತದಾನ ಮಾಡಲಿದ್ದಾರೆ. ರಕ್ತದಾನ ಅಭಿಯಾನದ ಉದ್ಘಾಟನಾ ಕಾರ್ಯಕ್ರಮವು ಮಂಗಳೂರು ವಲಯ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ರಕ್ತದಾನಿ ಬಳಗದ ನೇತೃತ್ವದಲ್ಲಿ ಆಗಸ್ಟ್ 19 ರಂದು ವಲಚ್ಚಿಲ್ ದರ್ಗಾ ಷರೀಫ್ ಸಭಾಂಗಣದಲ್ಲಿ ನಡೆಯಲಿದೆ. ಎಸ್.ಕೆ.ಎಸ್.ಎಸ್.ಎಫ್ ದ.ಕ ಜಿಲ್ಲಾದ್ಯಕ್ಷರಾದ ಅಮೀರ್ ತಂಙಳ್ ಕಿನ್ಯಾ ಕಾರ್ಯಕ್ರಮದಲ್ಲಿ ದುಅ ವನ್ನು ನೆರವೇರಿಸಲಿದ್ದಾರೆ ಕಾರ್ಯಕ್ರಮದ ಉದ್ಘಾಟನೆಯನ್ನು ವಳಚ್ಚಿಳ್ ಖತೀಬರಾದ ಕುಕ್ಕಿಲ ದಾರಿಮಿ ಉಸ್ತಾದರು ನಡೆಸಲಿದ್ದಾರೆ. ಎಸ್ಕೆಎಸ್ಸೆಸ್ಸೆಪ್ ಕರ್ನಾಟಕ ರಾಜ್ಯಾದ್ಯಕ್ಷರಾದ ಅನೀಸ್ ಕೌಸರಿ ಉಸ್ತಾದರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಜಿಲ್ಲಾ ವಿಖಾಯ ಚೇರ್ಮೆನ್ ಇಸ್ಮಾಯಿಲ್ ತಂಙಳ್ ಮುಖ್ಯ ಅತಿಥಿಗಳಾಗಿ ಬಾಗವಹಿಸುವ ಈ ರಕ್ತದಾನ ಅಭಿಯಾನದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಖಾಯ ರಕ್ತದಾನಿ ಬಳಗದ ಉಸ್ತುವಾರಿ ತಾಜುದ್ದೀನ್ ಟರ್ಲಿ ಹಾಗೂ ಮಂಗಳೂರು ವಲಯ ಉಸ್ತುವಾರಿ ನಝೀರ್ ವಲಚ್ಚಿಲ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ
- Thursday
- November 21st, 2024